ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ದೇವೇಗೌಡರು ಪ್ರಧಾನಿ ಆದಾಗ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿರಲಿಲ್ಲ, ಜನತಾದಳದಲ್ಲಿದ್ದರು.ಆಗ ಇದ್ದ ಯುನೈಟೆಡ್ ಪ್ರಂಟ್ ದೇವೆಗೌಡರು ಪ್ರಧಾನಿ ಅಭ್ಯರ್ಥಿ ಅಂತ ತೀರ್ಮಾನ ಮಾಡಿತ್ತು.ಅದಕ್ಕೆ ಕಾಂಗ್ರೆಸ್ ನವರು ಬೆಂಬಲ ನೀಡಿದ್ದರು. ಇದೇ ಸಿದ್ದರಾಮಯ್ಯ ಪಕ್ಷ ಸಂಘಟನೆ ಬಗ್ಗೆ ಗಮನವೇ ಕೊಡಲಿಲ್ಲ. ಸಿಎಂ ಕುರ್ಚಿ ಮೇಲೆ ಟವೆಲ್ ಹಾಕೋದರಲ್ಲಿ ಬ್ಯುಜಿಯಾಗಿದ್ದರು.ದೇವೇಗೌಡರು ಪ್ರಧಾನಿಯಾಗಿದ್ದಾಗ ಮೈಸೂರು ನಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿ ಸೋಲಿಗೆ ಇದೇ ಸಿದ್ದರಾಮಯ್ಯ ಕಾರಣರಾಗಿದ್ದರು ಎಂದು ಕಿಡಿಕಾರಿದರು. 2018ರಲ್ಲಿ ನಾನು ಕಾಂಗ್ರೆಸ್ಸಿಗರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಬಿಜೆಪಿ 108 ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಕಾರಣ. ಕುಮಾರಸ್ವಾಮಿಯನ್ನು ನಾವೇ ಸಿಎಂ ಮಾಡಿದ್ದು ಅಂತ ಹೇಳೋ ಸಿದ್ದರಾಮಯ್ಯ ನನ್ನ ಅಧಿಕಾರದಿಂದ ಯಾಕೆ ತೆಗೆದರು ಎಂದು ಪ್ರಶ್ನಿಸಿದ್ದಾರೆ. ದೋಸ್ತಿ ಸರ್ಕಾರದಲ್ಲಿ ಅನೇಕ ಇಲಾಖೆಗಳನ್ನು ಹಂಚಿಕೊಂಡ ಕಾಂಗ್ರೆಸ್ಸಿಗರು ಕಮಿಷನ್ ಹಂಚಿಕೊಂಡರು. ಆಗ ನಡೆದ ಉಪಚುನಾವಣೆ ಖರ್ಚನ್ನು ನನ್ನಿಂದ ಮಾಡಿಸಿದ್ರು ಎಂದು ಕಿಡಿಕಾರಿದ್ದಾರೆ. ಕೋಮುವಾದಿ ಬಿಜೆಪಿ ದೂರವಿಡಲು ಜೆಡಿಎಸ್ ಅಭ್ಯರ್ಥಿಯನ್ನು ವಾಪಸ್ ಪಡೆಯಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ಕೆಲಸ ಅವರೇ ಮಾಡಲಿ. ಕೋಮುವಾದಿಗಳನ್ನು ದೂರ ಇಡಲು ತಾವೇ ವಾಪಾಸ್ ತಗೊಳ್ಳಲಿ. 2016 ರಲ್ಲಿ ನಾನು ಮುಸ್ಲಿಂ ಕ್ಯಾಂಡಿಡೇಟ್ ಹಾಕಿರಲಿಲ್ವಾ ?.8 ಜೆಡಿಎಸ್