ದೇವೇಗೌಡರ ಮನವಿಯನ್ನು ಒಪ್ಪುತ್ತಾ ಹೈಕಮಾಂಡ್?

ಮಂಗಳವಾರ, 31 ಮೇ 2022 (10:02 IST)
ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನ.

3 ಪಕ್ಷಗಳಲ್ಲಿ ಭರ್ಜರಿ ರಾಜಕೀಯ ನಡೆಯುತ್ತಿದ್ದು ಕಾಂಗ್ರೆಸ್ 2ನೇ ಅಭ್ಯರ್ಥಿ ಬೆನ್ನಲ್ಲೇ ಬಿಜೆಪಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 3ನೇ ಅಭ್ಯರ್ಥಿ ಆಗಿ ಲೆಹರ್ ಸಿಂಗ್ಗೆ ಟಿಕೆಟ್ ನೀಡಲಾಗಿದೆ. ನಿರ್ಮಲಾ ಸೀತಾರಾಮನ್, ಜಗ್ಗೇಶ್ ಬಳಿಕ ಲೆಹರ್ ಸಿಂಗ್ಗೆ ಬಿಜೆಪಿಯ ರಾಜ್ಯಸಭೆ ಟಿಕೆಟ್ ಘೋಷಿಸಲಾಗಿದೆ.

ಕಾಂಗ್ರೆಸ್ 2ನೇ ಅಭ್ಯರ್ಥಿ ಮನ್ಸೂರ್ ಖಾನ್ ಅಖಾಡದಲ್ಲಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಜೆಡಿಎಸ್ ಶಾಸಕರ ಕ್ರಾಸ್ ಓಟಿಂಗ್ ಲೆಕ್ಕಾಚಾರದಲ್ಲಿದೆ. 2016ರಲ್ಲಿ ಜಮೀರ್ ಸೇರಿದಂತೆ ಜೆಡಿಎಸ್ನ 8 ಶಾಸಕರು ಕ್ರಾಸ್ ಓಟಿಂಗ್ ಮಾಡಿದ್ದರು. ಈ ಬಾರಿ ಗುಬ್ಬಿ ಶ್ರೀನಿವಾಸ್ ಸೇರಿದಂತೆ ಐವರು ಜೆಡಿಎಸ್ ಶಾಸಕರು ತಮ್ಮ ಅಭ್ಯರ್ಥಿಗೆ ಮತ ಹಾಕಬಹುದು ಎಂಬ ಧೈರ್ಯದಲ್ಲಿ ಕಾಂಗ್ರೆಸ್ ಇದೆ ಎನ್ನಲಾಗುತ್ತಿದೆ. 

ಜೆಡಿಎಸ್ಗೆ ಪ್ರತಿಷ್ಠೆಯ ಕಣವಾಗಿರುವ ಕಾರಣ ಕುಪೇಂದ್ರ ರೆಡ್ಡಿಗೆ ಇಂದು ನಾಮಪತ್ರ ಸಲ್ಲಿಸಲು ಸಿದ್ಧವಾಗುವಂತೆ ದೇವೇಗೌಡ ಸೂಚಿಸಿದ್ದಾರೆ. ಕುಪೇಂದ್ರ ರೆಡ್ಡಿಗೆ ಗೆಲ್ಲಲು ಬೇಕಾದ ಮತಗಳನ್ನ ಕಾಂಗ್ರೆಸ್ನಿಂದ ಪಡೆಯಲು ಅಗತ್ಯ ಮಾತುಕತೆ ನಡೆಸುವಂತೆ ದೇವೇಗೌಡರು ಸೂಚನೆ ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ