ಬಿಜೆಪಿಯಲ್ಲಿ ಬಿದ್ದಿದೆ ಭಾರೀ ಬೆಂಕಿ

ಮಂಗಳವಾರ, 17 ಡಿಸೆಂಬರ್ 2019 (18:43 IST)
ಹೊಸ ಬೆಳವಣಿಗೆಯೊಂದರಲ್ಲಿ ರಾಜ್ಯದ ಬಿಜೆಪಿಯಲ್ಲಿ ಭಾರೀ ಬೆಂಕಿ ಬಿದ್ದಿದೆ.

ಹೀಗಂತ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿಯಲ್ಲಿ ಈಗ ಕಾಣಿಸಿಕೊಂಡಿರೋ ಬೆಂಕಿ ಹೆಚ್ಚಾಗುತ್ತದೆ ಎಂದಿದ್ದಾರೆ.

ಈಗಾಗಲೇ ಮೂವರು ಡಿಸಿಎಂಗಳಿದ್ದಾರೆ. ಇನ್ನಷ್ಟು ಮಂದಿ ಶಾಸಕರು ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಈ ಬೆಂಕಿ ತಕ್ಷಣಕ್ಕೆ ಆರೋದಿಲ್ಲ ಎಂದಿದ್ದಾರೆ.

ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒಂದು ಬಣ ಹಾಗೂ ಮತ್ತೊಂದು ಬಣದವರು ನೂತನ ಶಾಸಕರಾಗಿದ್ದು ಸಚಿವ ಸ್ಥಾನಕ್ಕಾಗಿ ಒಳಗಿಂದೊಳಗೆ ಕತ್ತಿ ಮಸೆಯುತ್ತಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ