ಬಿಜೆಪಿ ಅಧಿಕಾರ ಅವಧಿಯಲ್ಲೇ ಸರಕಾರಿ ಕಚೇರಿಯಲ್ಲಿ ಅಧಿಕಾರಿಗಳ ಮಸ್ತ್ ಎಣ್ಣೆ ಪಾರ್ಟಿ
ಸೋಮವಾರ, 16 ಡಿಸೆಂಬರ್ 2019 (19:40 IST)
ಸರ್ಕಾರಿ ಕಚೇರಿಯಲ್ಲಿ ಮಸ್ತ್ ಮಸ್ತ್ ಆಗಿ ಕುಡುಕರ ಪಾರ್ಟಿ ನಡೆದಿದೆ.
ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಕಚೇರಿಯಲ್ಲಿ ಸಿಬ್ಬಂದಿ, ಏಜೆಂಟ್ ಎಣ್ಣಿ ಪಾರ್ಟಿ ನಡೆಸಿದ್ದಾರೆ. ಗದಗ ನಗರದ ಎಪಿಎಂಸಿ ಯಾರ್ಡ್ ಹತ್ತಿರ ಇರೋ ಕಚೇರಿಯಲ್ಲಿ ಈ ಘಟನೆ ನಡೆದಿದೆ.
ಭಾರತ ಸರ್ಕಾರದ ಅಧೀನದಲ್ಲಿ ಇರೋ ಓರಿಯಂಟಲ್ ಇನ್ಶುರೆನ್ಸ್ ಕಂಪನಿಯ ಕಚೇರಿಯಲ್ಲೇ ರಾತ್ರಿ 10 ಗಂಟೆ ಸುಮಾರಿಗೆ ಕಚೇರಿಯಲ್ಲಿ ಎಣ್ಣಿ ಪಾರ್ಟಿ ನಡೆದಿದೆ.
ಮಾಧ್ಯಮಗಳ ಕ್ಯಾಮರಾ ನೋಡಿ ಕಕ್ಕಾಬಿಕ್ಕಿಯಾದ ಸಿಬ್ಬಂದಿ, ಏಜೆಂಟ್, ಕಂಪನಿ ಸಿಬ್ಬಂದಿ ಅಶೋಕ ಮತ್ತು ಏಜೆಂಟ್ ವಿಶ್ವನಾಥ ಎಣ್ಣಿ ಪಾರ್ಟಿಯಲ್ಲಿದ್ದರು.
ಎಣ್ಣೆ ಪಾರ್ಟಿ ಚಿತ್ರೀಕರಣ ಮಾಡುತ್ತಿದ್ದಂತೆ ಸ್ನ್ಯಾಕ್ಸ್, ಚಟ್ನಿ, ಎಣ್ಣೆ ಬಚ್ಚಿಟ್ಟು ಕುಡುಕ ಏಜೆಂಟ್, ಸಿಬ್ಬಂದಿ ಪರಾರಿಯಾದ್ರು.