ರಾಯಚೂರು: ಕಳೆದ ಕೆಲ ದಿನಗಳಿಂದ ಬಿಸಿಲ ಬೇಗೆಗೆ ಸುಸ್ತಾಗಿದ್ದ ಜನತೆಗೆ ಜಿಲ್ಲೆಯ ಹಲವೆಡೆ ಇಂದು ಆಲಿಕಲ್ಲು ಮಳೆಯಾಗಿದೆ.
ಸುರಿದ ಭಾರೀ ಮಳೆ ಬಿಸಿಲಿನಿಂದ ತತ್ತರಿಸಿದ್ದ ಬಿಸಿಲನಾಡಿನ ಜನರಿತೆಗೆ ಸ್ವಲ್ಪ ತಂಪಾಗಿದೆ.
ಜಿಲ್ಲೆಯ ಕವಿತಾಳ, ಪಾಮನಕಲ್ಲೂರು, ವಟಗಲ್, ಅಮಿನಗಡ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಗುಡುಗು, ಮಿಂಚು ಸಹಿತ ಜೋರಾಗಿ ಮಳೆ ಸುರಿದಿದ್ದು, ಬಿಸಿಲಿನಿಂದ ಬೇಸತ್ತಿದ್ದ ಜನರಿಗೆ ತಂಪು ನೀಡಿದೆ. ಆಲಿಕಲ್ಲು ಮಳೆಯಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ಅಚ್ಚರಿ ಮೂಡಿಸಿದೆ.
ಇಂದು ಮಧ್ಯಾಹ್ನ ವೇಳೆ ಸುಮಾರು ಗಂಟೆಗೂ ಹೆಎಚ್ಚು ಕಾಲ ಮಳೆಯಾಗಿದೆ. ಏಕಾಏಕಿ ಮಳೆ ಸುರಿದಿದ್ದರಿಂದ ಬಸ್ ಸ್ಟಾಪ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲಕಾಲ ಜನರು ಪರದಾಡುವಂತಾಗಿತ್ತು.