ಸಿಕ್ಕಿಂನಲ್ಲಿ ಭಾರಿ ಮಳೆ,ಮೇಘ ಸ್ಫೋಟ,23 ಯೋಧರು ನಾಪತ್ತೆ..!

ಗುರುವಾರ, 5 ಅಕ್ಟೋಬರ್ 2023 (18:20 IST)
ಸಿಕ್ಕಿಂನಲ್ಲಿ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಯೋಧರ ಪತ್ತೆಗೆ ವ್ಯಾಪಕ ಶೋಧ ನಡೆಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.  ಮೇಘಸ್ಫೋಟದಿಂದ ಲಾಚೆನ್ ಕಣಿವೆಯ ಉದ್ದಕ್ಕೂ ಸ್ಥಾಪಿಸಲಾಗಿದ್ದ ಕಟ್ಟಡಗಳಿಗೆ ಹಾನಿಯಾಗಿದೆ. ಮೇಘಸ್ಫೋಟ ಹಾಗೂ ಎಡೆಬಿಡದೇ ಸುರಿದ ಮಳೆಯಿಂದ ಚುಂಗ್ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಲಾಯ್ತು ಇದು ನೀರಿನ ಮಟ್ಟವು 15ರಿಂದ 20 ಅಡಿ ಎತ್ತರದವರೆಗೆ ಹೆಚ್ಚಿದೆ. ಇದರ ಪರಿಣಾಮ ಸಿಂಗ್ಟಾಮ್ ಬಳಿಯ ಬರ್ದಂಗ್‌ನಲ್ಲಿ ನಿಲುಗಡೆ ಮಾಡಲಾದ ಸೇನಾ ವಾಹನಗಳಿಗೆ ಹಾನಿಯಾಗಿದ್ದು, 23 ಸಿಬ್ಬಂದಿ ಯೋಧರು ನಾಪತ್ತೆಯಾಗಿದ್ದಾರೆ.ಇನನ್ನು ಹಲವು ವಾಹನಗಳು ಮುಳುಗಿದ್ದು ನಾಪತ್ತೆಯಾದವರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಸೇನಾ ಪ್ರಕಟಣೆ ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ