ರಾಜ್ಯದಲ್ಲಿ ಶೇ.50ರಷ್ಟು ಹಿಂಗಾರು ಮಳೆ ಸಂಭವ-ಹವಾಮಾನ ಇಲಾಖೆ

ಬುಧವಾರ, 4 ಅಕ್ಟೋಬರ್ 2023 (20:21 IST)
ಅಕ್ಟೋಬರ್‌, ನವೆಂಬರ್‌ ಹಾಗೂ ಡಿಸೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.40 ರಿಂದ 50 ರಷ್ಟು ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್‌ ಮಾಹಿತಿ ನೀಡಿದ್ದಾರೆ.ಮುಂಗಾರು ಮಳೆ ಹಿಂಬರುವಿಕೆಗೆ ಆರಂಭಗೊಂಡಿದೆ. ಅಕ್ಟೋಬರ್‌ 15ರ ವೇಳೆ ರಾಜ್ಯದಿಂದ ಹಿಂಮುಖವಾದ ಬಳಿಕ ಹಿಂಗಾರು ಆರಂಭಗೊಳ್ಳಲಿದೆ. ಸದ್ಯದ ಮಾಹಿತಿ ಪ್ರಕಾರ ಹಿಂಗಾರು ಅವಧಿಯ ಒಟ್ಟಾರೆ ಮಳೆ ಪ್ರಮಾಣಕ್ಕಿಂತ ಶೇ.40 ರಿಂದ 50 ರಷ್ಟು ಹೆಚ್ಚಿನ ಮಳೆ ಆಗಲಿದೆ. ಅದರಲ್ಲೂ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ದಕ್ಷಿಣ ಒಳನಾಡು ಜಿಲ್ಲೆಗಳಾದ ಕೊಡಗು, ಮಂಡ್ಯ, ಹಾಸನ ಸೇರಿದಂತೆ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ