ಬೆಳಗ್ಗೆಯಿಂದ ಮೋಡ ಮುಸುಕಿನ ವಾತಾವರಣ ಕಂಡು ಬಂದು, ಮಧ್ಯಾಹ್ನದ ನಂತರ ಮಳೆ ಸುರಿಯುವ ಸಾಧ್ಯತೆ ಇದೆ. ನಗರದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ, ಇನ್ನು ಹಲವು ಪ್ರದೇಶಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಬರಲಿದೆ.
ಹವಾಮಾನ ವೈಪರಿತ್ಯ ಕಾರಣಕ್ಕೆ ವ್ಯಾಪಕ ಮಳೆ; ಛತ್ತೀಸ್‌ಗಢ ತಮಿಳುನಾಡು ಮಾರ್ಗವಾಗಿ ಕನ್ಯಾಕುಮಾರಿ ವರೆಗೆ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಅದು ಸಮುದ್ರ ಮಟ್ಟದಿಂದ 900ಮೀಟರ್ ಎತ್ತರವಿದೆ. ಇನ್ನು ತಮಿಳುನಾಡು -ಆಂಧ್ರಪ್ರದೇಶದ ಕರಾವಳಿ ಮತ್ತು ಬಂಗಾಳಕೊಲ್ಲಿಯಲ್ಲಿ ಭಾಗದಲ್ಲಿ ಗಾಳಿ ತೀವ್ರತೆ ಹೆಚ್ಚಾಗಿದೆ. ಈ ಕಾರಣಗಳಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿ ಮತ್ತು ವಿಜ್ಞಾನಿ ಪ್ರಸಾದ್ ವಿವರಿಸಿದರು.