ರಾಜ್ಯದಲ್ಲಿ ರಾತ್ರಿ ವರುಣನ ಅಬ್ಬರ

ಬುಧವಾರ, 27 ಸೆಪ್ಟಂಬರ್ 2017 (07:49 IST)
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.


ಬೆಂಗಳೂರು, ಮೈಸೂರು, ದಾವಣೆಗೆರೆ, ತುಮಕೂರು ಜಿಲ್ಲೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ನೆಲಮಂಗಲ ತಾಲೂಕಿನ ಬಳಿ ರಸ್ತೆಗೆ ನೀರು ನುಗ್ಗಿದ್ದರಿಂದ ವಾಹನಗಳು ಚಲಿಸಲಾಗುತ್ತಿಲ್ಲ. ಬಸ್ ಒಳಗಡೆ ಸಿಲುಕಿರುವ ಜನ ಪರದಾಡುವಂತಾಗಿದೆ.

ಮೈಸೂರಿನಲ್ಲೂ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಬೆಂಗಳೂರಿನಲ್ಲೂ ಹಲವೆಡೆ ದಾಖಲೆ ಮಳೆಯಾಗಿದ್ದು, ಕೆಲವೆಡೆ ಕೌಂಪೌಂಡ್ ಕುಸಿತ, ಮನೆಗೆ ನೀರು ನುಗ್ಗಿ ಜನ ಬಿಬಿಎಂಪಿ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ತುಮಕೂರಿನಲ್ಲೂ ಭಾರೀ ಮಳೆಯಾಗಿದ್ದು, ಅವಾಂತರವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ