ಮಧ್ಯಕರ್ನಾಟಕದಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಗುರುವಾರ, 18 ಅಕ್ಟೋಬರ್ 2018 (15:38 IST)
ಮಧ್ಯ ಕರ್ನಾಟಕ ಪ್ರದೇಶದಲ್ಲಿ ಭಾರಿ ಮಳೆ ಸುರಿದಿದೆ. ಇದರಿಂದಾಗಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರೆ, ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ದಾವಣಗೆರೆ ಸುತ್ತಮುತ್ತ ಮಳೆ ಅವಾಂತರ ಸೃಷ್ಟಿಸಿದೆ. ಮಳೆ ನೀರಿನ ರಭಸಕ್ಕೆಹಲವು ಬೈಕ್ ಗಳು ಕೊಚ್ಚಿ ಹೋಗಿವೆ.
ದಾವಣಗೆರೆ ನಗರದ ಹೂವಿನ ಮಾರ್ಕೆಟ್, ಸರ್ಕಾರಿ ಬಸ್ ನಿಲ್ದಾಣ, ಬೂದಿಹಾಳ್ ರಸ್ತೆ ಸೇರಿದಂತೆ ಹಲವೆಡೆ ನೀರಿನಲ್ಲಿ ಬೈಕ್ ಗಳು ಕೊಚ್ಚಿ ಹೋಗಿವೆ.

ನೂರಾರು ಮನೆಗಳಿಗೆ ನುಗ್ಗಿರುವ ಮಳೆ ನೀರು ಹಾನಿಯುಂಟುಮಾಡಿದೆ.
ಸಂಚಾರ ಪೊಲೀಸ್ ಠಾಣೆಗೆ ನುಗ್ಗಿದ ಮಳೆ ನೀರನ್ನು ಹೊರಹಾಕುವಲ್ಲಿ ಅಲ್ಲಿನ ಸಿಬ್ಬಂದಿಗೆ ಸಾಕುಬೇಕಾಯಿತು.
ದಾವಣಗೆರೆ ಸಂಚಾರ ಪೊಲೀಸ್ ಠಾಣೆಗೆ ನುಗ್ಗಿದ ಚರಂಡಿ ನೀರು ಗಲೀಜು ವಾತಾವರಣ ನಿರ್ಮಿಸಿದೆ.

ಕೆಸರಿನಿಂದ ತುಂಬಿ ಹೋದ ಸಂಚಾರಿ ಪೋಲಿಸ್ ಠಾಣೆಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದರು.  ಜನಜೀವನ ಕೂಡ ಅಸ್ತವ್ಯವಸ್ತಗೊಂಡಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ