ಭಾರೀ ಮಳೆ : ರಾಜ್ಯದಿಂದ ತೆರಳುವ 15 ರೈಲು ಸಂಚಾರ ರದ್ದು

ಶನಿವಾರ, 24 ಜುಲೈ 2021 (16:16 IST)
ಬೆಂಗಳೂರು (ಜು.24): ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದಿಂದ ವಿವಿಧ ರಾಜ್ಯಗಳಿಗೆ ತೆರಳುವ 15 ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ರದ್ದು ಮಾಡಿದೆ.

•ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರೀ ಮಳೆ
•ರಾಜ್ಯದಿಂದ ವಿವಿಧ ರಾಜ್ಯಗಳಿಗೆ ತೆರಳುವ 15 ರೈಲುಗಳ ಸಂಚಾರ ರದ್ದು

ಮಹಾರಾಷ್ಟ್ರದ ಕೊಂಕಣ ಕರಾವಳಿಯಲ್ಲಿ ಹರಿಯುವ  ವಸಿಷ್ಠ ನದಿಯ ಭಾರೀ ಮಳೆಯಿಂದ ಭರ್ತಿಯಾಗಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಗೋವಾದ ಸೋನಾಲಿಯಮ್ ಕಲೇಮ್ ದೂದಸಾಗರ - ಕ್ರಾನ್ಜೋಲ್ ರೈಲು ಮಾರ್ಗದಲ್ಲಿ ಭೂ ಕುಸಿತವಾಗಿದೆ. ಅದ್ದರಿಂದ ರಾಜ್ಯದಿಂದ ವಿವಿಧ ರಾಜ್ಯಗಳಿಗೆ ತೆರಳುವ 15 ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
 ರದ್ದಾದ ರೈಲು : ವಾಸ್ಕೋಡಾ ಗಾಮ- ಹೌರಾ ಎಕ್ಸ್ಪ್ರೆಸ್, ವಾಸ್ಕೊಡಾಗಾಮ - ತಿರುಪತಿ/ಹೈದರಾಬಾದ್ ಎಕ್ಸ್ಪ್ರೆಸ್ ಸ್ಪೆಷಲ್, ಯಶವಂತಪುರ - ವಾಸ್ಕೋಡಾಗಾಮ ಎಕ್ಸ್ಪ್ರೆಸ್, ವಾಸ್ಕೋಡಾ ಗಾಮ  - ಯಶವಂತಪುರ ಎಕ್ಸ್ಪ್ರೆಸ್.
ವಾಸ್ಕೋಡಾ ಗಾಮ - ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್, ಹುಬ್ಬಳ್ಳಿ-ದಾದರ್ ಎಕ್ಸ್ಪ್ರೆಸ್, ಹಜರತ್ ನಿಜಾಮುದ್ದಿನ್ - ವಾಸ್ಕೋಡಾ ಗಾಮ ಎಕ್ಸ್ಪ್ರೆಸ್, ಕೆಎಸ್ಆರ್ ಬೆಂಗಳೂರು - ಮಿರಜ್ ಎಕ್ಸ್ಪ್ರೆಸ್, ಬೆಂಗಳೂರು- ಬೆಳಗಾವಿ ಎಕ್ಸ್ಪ್ರೆಸ್, ತಿರುಪತಿ - ಶಾಹು ಮಹಾರಾಜ್ ಟರ್ಮಿನಲ್ ಎಕ್ಸ್ಪ್ರೆಸ್, ಹೌರಾ-ವಾಸ್ಕೊಡಾ ಗಾಮ ಎಕ್ಸ್ಪ್ರೆಸ್ ರೈಲು ಸೇರಿದಮತೆ ಹಲವು ರದ್ದಾಗಿವೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ