ಜುಲೈ 8 ರಿಂದ 10 ರ ವರೆಗೆ ಭಾರಿ ಮಳೆ ಎಲ್ಲೆಲ್ಲಿ ಬೀಳುತ್ತೆ ಗೊತ್ತಾ?

ಶುಕ್ರವಾರ, 6 ಜುಲೈ 2018 (15:45 IST)
ರಾಜ್ಯದ ಕರಾವಳಿಯಲ್ಲಿ ಜುಲೈ 8 ರಿಂದ 10 ರ ವರೆಗೆ ಭಾರಿ ಮಳೆ ಯಾಗುವ ಮುನ್ಸೂಚನೆ ಯನ್ನು ಭಾರತೀಯ ಹವಾ ಮಾನ ಇಲಾಖೆ ನೀಡಿದೆ. ಗೋವಾ,  ಮಹಾರಾಷ್ಟ್ರ ಕೇರಳ ರಾಜ್ಯ ಸೇರಿದಂತೆ ಕೊಂಕಣ  ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ .

ಈ ಹಿಂದೆ ಜುಲೈ 5 ರಿಂದ 7 ರ ವರೆಗೆ ಭಾರಿ ಮಳೆ ಆಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿತ್ತು .
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ  ನಿಂದ ಧಾರಾಕಾರ ಮಳೆಯಾಗುತ್ತಿದ್ದು  ಜನ ಜೀವನ ಅಸ್ತವ್ಯಸ್ತಗೊಂಡಿದೆ. 


ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ನದಿ ತೀರದ ಜನತೆ ಸೂಕ್ತ ಹಾಗೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ