ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿದ್ರು
ಕತ್ತೆಗಳಿಗೆ ಮದುವೆ ಮಾಡಿದ್ರೆ ಮಳೆಬರುತ್ತೆ ಅನ್ನೋದು ವಾಡಿಕೆ. ಅದರಂತೆ ಉತ್ತರ ಕರ್ನಾಟಕದ ಭಾಗಗಳಲ್ಲಿ ಅಲ್ಲಲ್ಲಿ ಮಳೆಗಾಗಿ ಪ್ರಾರ್ಥಿಸಿ ಕತ್ತೆಗಳ ಮದುವೆ ಮಾಡಲಾಗುತ್ತದೆ.
ಹೆಬ್ಬಾಗಿಲು ಹಾವೇರಿ ಜಿಲ್ಲೆಯ ರಾಣಿಬೇನ್ನೂರು ತಾಲೂಕಿನಲ್ಲಿ, ರೈತಾಪಿ ವರ್ಗದ ಜನ್ರು ಮಳೆಗಾಗಿ ವರುಣ ದೇವನಿಗೆ ಮೊರೆ ಹೋಗಿ ಕತ್ತೆಗಳ ಮಧುವೆ ಮಾಡಿಸಿದ್ರು.
ಹೆಣ್ಣು ಕತ್ತೆಗೆ ಸೀರೆ ಕುಪ್ಪುಸ ಉಡಿಸಿದ್ರೆ ಗಂಡು ಕತ್ತೆಗೆ ಪಂಚೆ ಶಲ್ಯೆ ಹಾಕಿ ಬಾಸಿಂಗ ಕಟ್ಟಿ ಊರೂ ತುಂಬ ಮೆರವಣಿಗೆ ಮಾಡಿದ್ರು. ಕತ್ತೆಗಳ ಮಧುವೆಗೆ ಬಂದವರಿಗೆ ಮದುವೆ ಊಟಹಾಕಿ ಮಳೆಗಾಗಿ ಪ್ರಾರ್ಥಿಸಿದ್ರು.