ಕೇಂದ್ರ ಸಚಿವ, ಶಾಸಕ, ಜಿಲ್ಲಾಧಿಕಾರಿಗೆ ತಟ್ಟಿದ ಟ್ರಾಫಿಕ್ ಬಿಸಿ; ಪೊಲೀಸರು ಮಾಡಿದ್ದೇನು?

ಸೋಮವಾರ, 9 ಜುಲೈ 2018 (18:17 IST)
ಮಂಗಳೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ  ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮದುವೆ ಹಾಲ್ ಗಳ ಮುಂದೆ ರಸ್ತೆ ಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದರಿಂದ ಇನ್ನಷ್ಟು ಸಮಸ್ಯೆ ಉಂಟಾಗುತ್ತಿತ್ತು. ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ನಿನ್ನೆಯೂ ಕೂಡಾ ಬಂಟ್ವಾಳ್ ಬಳಿಯ ಪಾಣೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪ  ಸಾಗರ್ ಮದುವೆ ಹಾಲ್ ಮುಂಭಾಗದಲ್ಲಿ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಿರುವುದರಿಂದ  ಗಂಟೆ ಗಟ್ಟಲೆ ರೋಡ್ ಬ್ಲಾಕ್ ಆಗಿತ್ತು. ಈ ಬ್ಲಾಕ್ ನಲ್ಲಿ ಕೇಂದ್ರ ಸಚಿವ ಸದಾನಂದ ಗೌಡ,  ಬಂಟ್ವಾಳ್ ಶಾಸಕ ರಾಜೇಶ್ ನಾಯ್ಕ್,  ಜಿಲ್ಲಾಧಿಕಾರಿ ಶಶಿಕಾಂತ್, ಪತ್ರಕರ್ತರು  ಕೂಡಾ ತೊಂದ್ರೆ ಅನುಭವಿಸಿದ್ರು.


ಕೂಡಲೇ  ಕಾರ್ಯ ಪ್ರವತ್ತರದ ಪೊಲೀಸರು ಕೆಲವೇ ನಿಮಿಷಗಳಲ್ಲಿ  ಟ್ರಾಫಿಕ್ ಕ್ಲಿಯರ್  ಮಾಡಿದ್ರು. ರಸ್ತೆಯಲ್ಲಿ  ನಿಲ್ಲಿಸಿದ್ದ  50 ಕ್ಕೂ ಹೆಚ್ಚು ವಾಹನಗಳ ಮೇಲೆ ಕೇಸ್ ದಾಖಲಿಸಿದ್ದರು.

ಇಂದೂ ಕೂಡ ಮಂಗಳೂರು ನಗರ ಸಂಚಾರಿ ಪೊಲೀಸ್ ರು ಎಸಿಪಿ ಮಂಜುನಾಥ್ ಶೆಟ್ಟಿ ನೇತೃತ್ವದಲ್ಲಿ  ಕಾರ್ಯಾಚರಣೆ ನಡೆಸಿ ನಗರದ ಮಿಲಾಗ್ರಿಸ್ ಚರ್ಚ್  ಬಳಿ ಇರುವ ಮಿಲಾಗ್ರಿಸ್ ಹಾಲ್ ಮುಂಭಾಗದಲ್ಲಿ ರಸ್ತೆ ಬದಿ ನಿಲ್ಲಿಸಿರುವ  50 ಕ್ಕೂ ಹೆಚ್ಚು ವಾಹನಗಳಿಗೆ ಲಾಕ್  ಹಾಕಿದರು. ಪ್ರಕರಣ ದಾಖಲಿಸಿದ್ದಾರೆ. ದಂಡವನ್ನು  ವಸೂಲಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ