Hebbal Accident: ಹೆಬ್ಬಾಳದಲ್ಲಿ ತಡರಾತ್ರಿ ಸರಣಿ ಅಪಘಾತ: ಲಾರಿ ಚಾಲಕ ದುರ್ಮರಣ

Krishnaveni K

ಶನಿವಾರ, 24 ಮೇ 2025 (10:08 IST)
Photo Credit: X
ಬೆಂಗಳೂರು: ನಗರದ ಹೆಬ್ಬಾಳ ಫ್ಲೈ ಓವರ್ ಮೇಲೆ ನಿನ್ನೆ ನಡೆದ ಸರಣಿ ಅಪಘಾತದಲ್ಲಿ ಕಸದ ಲಾರಿ ಚಾಲಕ ಮೃತಪಟ್ಟಿದ್ದು ಉಳಿದವರು ಬದುಕುಳಿದಿದ್ದೇ ಪವಾಡ ಎನ್ನಬಹುದು.

ಕಸದ ಲಾರಿಗೆ ಹಿಂಬದಿಯಿಂ 10 ಚಕ್ರದ ಬೃಹತ್ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ಕಸದ ಲಾರಿ ಚಾಲಕ ಫಯಾಜ್ ಅಹ್ಮದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.  ಈ ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ತಡರಾತ್ರಿ ಸುಮಾರ 2.00 ಗಂಟೆಗೆ ಘಟನೆ ನಡೆದಿದೆ. ಘಟನೆಯಲ್ಲಿ ಒಟ್ಟು ಮೂರು ವಾಹನಗಳು ಪಲ್ಟಿಯಾಗಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ಘಟನೆ ನಡೆದಿದೆ. ಕಲ್ಲುಗಳನ್ನು ತುಂಬಿದ್ದ ಟ್ರಕ್ ಪಲ್ಟಿಯಾಗಿ ರಸ್ತೆಯೆಲ್ಲಾ ಕಲ್ಲು ತುಂಬಿತ್ತು.

ಬಳಿಕ ಪೊಲೀಸರು ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಲ್ಲಿ ಒಂದು ಕಾರು ಕೂಡಾ ಜಖಂಗೊಂಡಿದೆ. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ