ದೇವಸ್ಥಾನದಲ್ಲಿ ಮಹಿಳೆ ಮೇಲೆ ಹೀನ ಕೃತ್ಯ

ಶುಕ್ರವಾರ, 6 ಜನವರಿ 2023 (14:56 IST)
ದೇವರೆದುರೆ ಮಹಿಳೆಗೆ ಹಿಗ್ಗಾ ಮುಗ್ಗ ಥಳಿಸಲಾಗಿದೆ.ಜಡೆ ಹಿಡಿದು ಹೊರೆಗೆ ಎಳೆದೊಯ್ದು ವ್ಯಕ್ತಿ ಬಿಸಾಕಿದಾನೆ.ಬೆಂಗಳೂರಲನ ಅಮೃತಹಳ್ಳಿಯಲ್ಲಿ ಇಂತಹ ಹೀನ ಕೃತ್ಯ ನಡೆದಿದೆ.ಕೃತ್ಯದ ಸಂಪೂರ್ಣ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.ಅಮೃತಹಳ್ಳಿ ಬಳಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ದೇವರ ದರ್ಶನಕ್ಕೆಂದು ಮಹಿಳೆ ಹೇಮಾವತಿ ತೆರಳಿದ್ರು‌.ಆ ವೇಳೆ ದೇವಸ್ಥಾನದಲ್ಲಿದ್ದ ಧರ್ಮದರ್ಶಿ ಮುನಿಕೃಷ್ಣ ಹೇಮಾವತಿ ಬರ್ತಿದ್ದಂತೆ ಅಡ್ಡಗಟ್ಟಿದ್ದಾನೆ.
 
ನೀನು ಸ್ನಾನ ಮಾಡ್ದೆ ಇರೊ‌ ತರ ಇದಿಯಾ.ನೀನು ಕಪ್ಪಗೆ ವಿಚಿತ್ರವಾಗಿ ಇದಿಯಾ?ನಿನ್ನನ್ನ ಒಳಗೆ ಬಿಡಲ್ಲ‌ ಎಂದು ಅಡ್ಡ ಹಾಕಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.ಆದರೂ ಒಳಗೆ ದೇವರ ದರ್ಶನಕ್ಕೆ ಬಂದ ಮಹಿಳೆ.ಆಕೆಯ ಜುಟ್ಟು ಹಿಡಿದು ಎಳೆದೊಯ್ದು ಮುನಿಕೃಷ್ಣ ಹೊರಹಾಕಿದ್ದಾನೆ.ರಾಡ್ ನಿಂದಲೂ ಹಲ್ಲೆಗೆ ಮುಂದಾಗಿದ್ದಾನೆ.ಹಲ್ಲೆ ಯತ್ನ ವೇಳೆ  ದೇವಸ್ಥಾನದ ಅರ್ಚಕ ತಡೆದಿದ್ದಾನೆ.ಕಳೆದ ಡಿ.21 ರಂದು ಘಟನೆ‌ ನಡೆದಿದ್ದು,ಯಾರಿಗೂ ಹೇಳದಂತೆ ಮುನಿಕೃಷ್ಣ ಬೆದರಿಕೆ ಹಾಕಿದ್ದ .ಆದ್ರೆ ವಿಚಾರ ತಡವಾಗಿ ಪತಿಗೆ ತಿಳಿಸಿದ್ದ ಹೇಮಾವತಿ.ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿ,ದೂರು ನೀಡಿ ಹಿಂಪಡೆದುಕೊಂಡಿದ್ದಾರೆ.
 
ದೇವಸ್ಥಾನದಲ್ಲಿ ಮಹಿಳೆ ಮೇಲೆ ಧರ್ಮದರ್ಶಿಯಿಂದ ಹಲ್ಲೆ ಪ್ರಕರಣ ಮುನಿಕೃಷ್ಣ ದೇವಸ್ಥಾನ ಒಳಗೆ ಬಿಡದೆ ತಡೆದಿದ್ದಾರೆಂದು ಮಹಿಳೆ ಆರೋಪಿಸಿದಾರೆ.ಆದರೆ ಮುನಿಕೃಷ್ಣ ಪೊಲೀಸರ ಎದುರು ಹೇಳಿರೋದೆ ಬೇರೆ,ನನಗೆ ದೇವರು ಬರುತ್ತೆ,ವೆಂಕಟೇಶ್ವರ ನನ್ನ ಪತಿ.ಗರ್ಭಗುಡಿಯಲ್ಲಿ ನಾನು ವೆಂಕಟೇಶನ ಪಕ್ಕ ಕೂರ ಬೇಕು.ಹೀಗೆ ದೇವಸ್ಥಾನದಲ್ಲಿ ಪಟ್ಟು ಹಿಡಿದಿದ್ದ ಮಹಿಳೆ.ವಿರೋಧ ವ್ಯಕ್ತಪಡಿಸಿದ್ದಕ್ಕೆ ಅರ್ಚಕರ ಮೇಲೆಯೇ ಉಗಿದಿದ್ದಾರೆ.ಎಷ್ಟೇ ಮನವಿ ಮಾಡಿಕೊಂಡಿದ್ರು ಹೋಗದಿದ್ದಾಗ ಥಳಿಸಿದ್ದೇವೆ ಎಂದು ಆಡಳಿತ ಮಂಡಳಿ ಹೇಳಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ