ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?

ಶುಕ್ರವಾರ, 6 ಜನವರಿ 2023 (11:09 IST)
ಬೆಂಗಳೂರು : ಅಂತೂ ಇಂತೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಅಖಾಡ ರೆಡಿಯಾಗ್ತಿದೆ. ಕೋಲಾರ ಘೋಷಣೆಗೂ ಮುನ್ನ ಇಂದು (ಶುಕ್ರವಾರ) ಬಾದಾಮಿ ಕ್ಷೇತ್ರದಲ್ಲಿ ಸಿದ್ದು ಸಂಚಾರ ಮಾಡಲಿದ್ದಾರೆ.
 
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ಕೊಡಲಿರುವ ಸಿದ್ದರಾಮಯ್ಯ ಬಾದಾಮಿ ಭೇಟಿ ವೇಳೆಯೇ ಕೋಲಾರ ಸ್ಪರ್ಧೆಯ ಸುಳಿ ಕೊಟ್ಟುಬಿಡ್ತಾರಾ ಎಂಬ ಕುತೂಹಲ ಮನೆ ಮಾಡಿದೆ.

ಜನವರಿ 9ರಂದು ಕೋಲಾರಕ್ಕೆ ಸಿದ್ದರಾಮಯ್ಯ ಸೆಕೆಂಡ್ ಎಂಟ್ರಿ ಕೊಡಲಿದ್ದಾರೆ. ಸೆಕೆಂಡ್ ಎಂಟ್ರಿಯಲ್ಲಿ ಕೋಲಾರ ಸ್ಪರ್ಧೆ ಬಗ್ಗೆ ಸಿದ್ದರಾಮಯ್ಯ ಘೋಷಣೆ ಮಾಡುವ ಸಾಧ್ಯತೆ ಇದೆ. ಕಡೇ ಚುನಾವಣೆಯಲ್ಲಿ ಪುತ್ರನ ಕ್ಷೇತ್ರ ಕಿತ್ತುಕೊಂಡು ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಒಪ್ಪುತ್ತಿಲ್ಲ.

ಕೋಲಾರದ ಜಾತಿ ಸಮೀಕರಣ, ಸರ್ವೇಗಳನ್ನ ಆಧರಿಸಿ ಅಖಾಡಕ್ಕಿಳಿಯಲು ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ ವರುಣಾದಲ್ಲಿ ಯತೀಂದ್ರ ಫಿಕ್ಸ್ ಮಾಡಿ, ಕೋಲಾರದಲ್ಲಿ ಸ್ಪರ್ಧಿಸಲು ಸಿದ್ದು ಮುಂದಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ