ರಾಜ್ಯ ಸರ್ಕಾರದಿಂದ ಹೆಲ್ಪ್ಲೈನ್ ಆರಂಭ
ಟರ್ಕಿ ಹಾಗೂ ಸಿರಿಯಾದಲ್ಲಿ 4 ಪ್ರಬಲ ಭೂಕಂಪಗಳು ಸಂಭವಿಸಿದ್ದು, ಜನತೆಯನ್ನು ಅಕ್ಷರಶಃ ನರಕಕ್ಕೆ ತಳ್ಳಿದೆ. ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಸಹಾಯವಾಣಿ ಆರಂಭಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಭಾರತದ ರಾಯಭಾರಿ ಕಚೇರಿ ಜತೆ ಸಂಪರ್ಕದಲ್ಲಿದೆ. ಸದ್ಯ ಇಲ್ಲಿ ತನಕ ಯಾವುದೇ ಕರೆ ಬಂದಿಲ್ಲ. ಕರೆ ಬಂದ ತಕ್ಷಣ ಅಗತ್ಯ ಸಹಾಯಕ್ಕೆ ತಯಾರಾಗಿದ್ದೇವೆ. ಟರ್ಕಿ ಭೂಕಂಪನ ವಿಚಾರ ಸಂಬಂಧ, ಯಾರಿಗಾದ್ರು ಸಹಾಯ ಬೇಕಿದ್ದಲ್ಲಿ ತಕ್ಷಣ 080-22340676 ಸಹಾಯವಾಣಿ ನಂಬರ್ಗೆ ಕರೆ ಮಾಡಿ ಎಂದು ಹೆಲ್ಪ್ ಲೈನ್ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.