ರಾಜ್ಯ ಬಜೆಟ್ನಲ್ಲಿ ಬಂಪರ್ ಕೊಡುಗೆ ಸುಳಿವು ನೀಡಿದ ಸಚಿವ ಸುಧಾಕರ್
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿರುವ ರಾಜ್ಯ ಬಜೆಟ್ನಲ್ಲಿ ನೀರಾವರಿಗೆ ವಿಶೇಷ ಕೊಡುಗೆ ನೀಡಬೇಕು.
ಜೊತೆಗೆ ರೈತರು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಪೂರಕವಾದ ವಿಶೇಷ ಯೋಜನೆಗಳು ಇರಲಿವೆ ಎಂದು ತಿಳಿಸಿದರು. ಇದೇ ತಿಂಗಳು 17ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಚಿಕ್ಕಬಳ್ಳಾಪುರಕ್ಕೆ ಭರಪೂರ ಕೊಡುಗೆಗಳ ಸುಳಿವನ್ನು ಸಚಿವ ಸುಧಾಕರ್ ನೀಡಿದ್ದಾರೆ.