ಹೇಮಾವತಿ ನದಿಗೆ ವಿಷಪ್ರಾಶನ ಆರೋಪ

ಭಾನುವಾರ, 24 ಡಿಸೆಂಬರ್ 2023 (16:40 IST)
ಹಾಸನದ ಜೀವನದಿಯಾಗಿರುವ ಹೇಮಾವತಿ ನದಿಯು ಈಗ ಕಲುಷಿತವಾಗುತ್ತಿದೆ. ಪುರಸಭೆಯಿಂದಲೇ ಹೇಮಾವತಿ ನದಿಗೆ ವಿಷಪ್ರಾಶನ ಮಾಡಲಾಗುತ್ತದೆ ಎಂಬ ಆರೋಪ ಕೇಳಿಬಂದಿದ್ದು, ಹೇಮಾವತಿ ನದಿಗೆ ಪುರಸಭೆ ಸಿಬ್ಬಂದಿ ಕಸ ವಿಲೇವಾರಿ ಮಾಡುತ್ತಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.
 
ನದಿ ದಡದಲ್ಲಿ ಗುಂಡಿ ತೆಗೆದು ಕಸವನ್ನ ಮುಚ್ಚುತ್ತಿದ್ದಾರೆಂದು ಕಿಡಿಕಾರಿದ್ದಾರೆ.. ಈ ನದಿಯಿಂದ ನಗರ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ