ಇತ್ತೀಚೆಗಿನ ದಿನಗಳಲ್ಲಿ ಯುವ ಜನಾಂಗದವರಿಗೂ ಹೃದಯದ ಖಾಯಿಲೆಗಳು ಸಾಮಾನ್ಯವಾಗುತ್ತಿದೆ. ನಿಮ್ಮ ಹೃದಯಕ್ಕೆ ಸಮಸ್ಯೆಯಾಗಿದೆಯೇ ಎಂದು ತಿಳಿಯಲು ಈ ಒಂದು ಸಿಂಪಲ್ ಟ್ರಿಕ್ಸ್ ಸಾಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಒಮ್ಮೆ ಸಂವಾದವೊಂದರಲ್ಲಿ ಹೇಳಿದ್ದರು.
ಡಾ ಸಿಎನ್ ಮಂಜುನಾಥ್ ಪ್ರಕಾರ ಇಂದಿನ ಜನಾಂಗದವರು ಸೋಮಾರಿಗಳಾಗುತ್ತಿದ್ದಾರೆ. ಇದುವೇ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಸೈಕ್ಲಿಂಗ್ ಅತ್ಯಂತ ಬೆಸ್ಟ್ ವ್ಯಾಯಾಮ. ಸೈಕ್ಲಿಂಗ್ ಮಾಡುವ ಅಭ್ಯಾಸವಿದ್ದರೆ ಅದು ನಮ್ಮ ಆರೋಗ್ಯಕ್ಕೆ ತುಂಬಾ ಉತ್ತಮ.
ಎಲ್ಲಕ್ಕಿಂತ ಹೆಚ್ಚು ಬಹುಮಹಡಿ ಕೆಲಸ ಮಾಡುವವರು ಲಿಫ್ಟ್ ಬಳಸದೇ ಮೆಟ್ಟಿಲು ಹತ್ತಿಕೊಂಡು ಹೋಗುವ ಅಭ್ಯಾಸವಿಟ್ಟುಕೊಳ್ಳಬೇಕು. ಮೆಟ್ಟಿಲು ಹತ್ತುವುದರಿಂದ ಕೇವಲ ವ್ಯಾಯಾಮ ಮಾತ್ರವಲ್ಲ ಇನ್ನೊಂದು ಲಾಭವಿದೆ.
ಮೆಟ್ಟಿಲು ಹತ್ತುವಾಗ ಏದುಸಿರುವು ಬರುವುದು ಸಹಜ. ಆದರೆ ಎದೆ ಉರಿ, ನೋವು ಬರುತ್ತಿದ್ದರೆ ನಿಮ್ಮ ಹೃದಯಕ್ಕೆ ಸಮಸ್ಯೆಯಿದೆ ಎಂದರ್ಥ. ಹೀಗಾಗಿ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೃದಯದ ಆರೋಗ್ಯವನ್ನು ಈ ರೀತಿಯಾಗಿ ನಯಾಪೈಸೆ ಖರ್ಚು ಮಾಡದೇ ಪರೀಕ್ಷಿಸಿಕೊಳ್ಳಬಹುದು ಎಂದು ಡಾ ಸಿಎನ್ ಮಂಜುನಾಥ್ ಹೇಳಿದ್ದರು.