ಮಹಿಳಾ ಶವಗಳ ಮೇಲೆ ಅತ್ಯಾಚಾರ ಶಿಕ್ಷಾರ್ಹಗೊಳಿಸಿ, ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ಮಂಗಳವಾರ, 6 ಜೂನ್ 2023 (10:03 IST)
ಬೆಂಗಳೂರು : 21 ವರ್ಷದ ಮೃತ ಮಹಿಳೆಯ ದೇಹದ ಮೇಲೆ ಲೈಂಗಿಕ ದೌರ್ಜ್ಯನ್ಯವೆಸಗಿದ್ದ ಆರೋಪಿಗೆ ಶಿಕ್ಷೆ ವಿಧಿಸಲು ಸೂಕ್ತ ಸೆಕ್ಷನ್ ಇಲ್ಲವೆಂದು ಕಾರಣ ನೀಡಿ ಕರ್ನಾಟಕ ಹೈಕೋರ್ಟ್ ಖುಲಾಸೆಗೊಳಿಸಿದೆ.
 
ನ್ಯಾಯಮೂರ್ತಿ ಬಿ ವೀರಪ್ಪ ಹಾಗೂ ವೆಂಕಟೇಶ್ ನಾಯಕ್ ಟಿ ಅವರಿದ್ದ ವಿಭಾಗೀಯ ಪೀಠ, ನೆಕ್ರೋಫಿಲಿಯಾ (ಮೃತದೇಹಗಳ ಮೇಲಿನ ಅತ್ಯಾಚಾರ) ಹಾಗೂ ವಿಕೃತಿಗೆ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾನೂನಿನ ತಿದ್ದುಪಡಿ ತರಬೇಕು. ಅಲ್ಲದೇ ಅತ್ಯಾಚಾರಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ಗೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನೆಕ್ರೋಫಿಲಿಯಾ ಎಂಬುದು ಅಪರೂಪದ ಮತ್ತು ಲೈಂಗಿಕ ಆಕರ್ಷಣೆ ಅಥವಾ ಮೃತ ದೇಹಗಳ ಕಡೆಗೆ ಆಕರ್ಷಣೆಯನ್ನು ವಿವರಿಸಲು ಬಳಸುವ ಪದವಾಗಿದೆ. ಇದು ಶವಗಳೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವ್ಯಕ್ತಿಯ ಬಯಕೆಯನ್ನು ಸೂಚಿಸುತ್ತದೆ. ಅನೇಕ ರಾಷ್ಟ್ರಗಳಲ್ಲಿ ಇದಕ್ಕೆ ನಿಷೇಧ, ನೈತಿಕವಾಗಿ ಖಂಡನೀಯ ಮತ್ತು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ.

ನೆಕ್ರೋಫಿಲಿಯಾ ಎಂದರೇ ಸತ್ತವರ ಕಡೆಗೆ ಪ್ರೀತಿ ಅಥವಾ ಆಕರ್ಷಣೆ ಹೊಂದುವುದು. ಲೀಗಲ್ ಸರ್ವಿಸಸ್ ಇಂಡಿಯಾದ ವರದಿ ಪ್ರಕಾರ ಸತ್ತವರ ಜೊತೆ ನೆಕ್ರೋಫಿಲಿಯಾಕ್ ಆತ್ಮೀಯತೆ ಅಥವಾ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವುದು. ನೆಕ್ರೋಫಿಲಿಯಾವನ್ನು ವ್ಯಕ್ತಿಯು ತನ್ನ ವಿವೇಚೆನಯಿಂದಲೇ ಮತ್ತು ಸ್ವಇಚ್ಛೆಯಿಂದ ಮಾಡುತ್ತಾನೆ ಎಂದು ಹೇಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ