ಬೆಂಗಳೂರಿನ ಯಾವ ಪುಟ್ ಪಾತ್‌ಗಳನ್ನ ನೋಡಿದ್ರು ಜನರ ಪ್ರಾಣ ಬಲಿ ಪಡೆಯಲು ಸಾಕ್ಷಾತ್ ಯಮನಂತೆ ಇರುವ ಒಂದಾದರು ಟ್ರಾನ್ಸ್ ಫಾರ್ಮ್ ಗಳು ನೋಡ ಸಿಗುತ್ತವೆ..ಜನರ ಪ್ರಾಣಕ್ಕೆ ಅಪಾಯ ತರುವಂತಿರುವ ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ 2,587 ಟ್ರಾನ್ಸ್ಫಾರ್ಮರ್‌ಗಳನ್ನು ಕಳೆದ ಬಾರಿ ಗುರುತ್ತಿಸಲಾಗಿತ್ತು.ಜನರ ಪ್ರಾಣಕ್ಕೆ ಕುತ್ತು ತರುವ ಹಿನ್ನೆಲೆಯಲ್ಲಿ ಪಾದಚಾರಿ ಮಾರ್ಗದಿಂದ ಬೇರೆಡೆ ಸ್ಥಳಾಂತರಿಸುವಂತೆ ಹೈಕೋರ್ಟ್ ಬೆಸ್ಕಾಂಗೆ ಆದೇಶಿಸಿತ್ತು .
ಅದರಂತೆಯೇ ಕಳೆದ ಮೂರು ನಾಲ್ಕು ವರ್ಷಗಳಿಂದ ಒಟ್ಟು 3196 ಟ್ರಾನ್ಸ್ಫಾರ್ಮರ್ಗಳನ್ನು ಸ್ಥಳಾಂತರಿಸಿದ್ದೇವೆ ಎಂದು ಬೆಸ್ಕಾಂ ಹೈಕೋರ್ಟ್ಗೆ ಮಾಹಿತಿ ನೀಡಿತ್ತು, ಅದರಂತೆ ಉಳಿದ 676 ಟ್ರಾನ್ಸ್ಫಾರ್ಮರ್‌ಗಳ ಸ್ಥಳಾಂತರ ಕಾರ್ಯವನ್ನು 2023ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಬೆಂಗಳೂರು ಮಹಾನಗರದ ಪಾದಚಾರಿ ಮಾರ್ಗದಲ್ಲಿ 5,784 ಟ್ರಾನ್ಸ್ಫಾರ್ಮರ್ಗಳಿತ್ತು ಅದನ್ನ ಹಂತ ಹಂತವಾಗಿ ಬೆಸ್ಕಾಂ ಸ್ಥಳಾಂತರ ಮಾಡಿದ್ದು ಇನ್ನುಳಿದ 676 ಟ್ರಾನ್ಸ್ ಫರ್ಮ್ ಸ್ಥಳಾಂತರಕ್ಕೆ ಸಪ್ಟೆಂಬರ್ ವರೆಗೂ ಸಮಯ ಕೇಳಿದ್ದಾರೆ,ಅದೇನೆ ಇರಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆದಷ್ಟು ಬೇಗ ಫುಟ್ ಪಾತ್ ಮೇಲಿನ ಎಲ್ಲಾ ಟ್ರಾನ್ಸ್ ಪಾರ್ಮ್‌ರ್‌ಗಳನ್ನ ಬೆಸ್ಕಾಂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕಿದೆ