ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಐಟಿ ಕಾರಿಡಾರ್ ನ ಹಲವು ಭಾಗಗಳು ಸೇರಿದಂತೆ
ಆಗ್ನೇಯ ಬೆಂಗಳೂರಿನ ವಿವಿಧೆಡೆ ಆಗಸ್ಟ್ 30 ರಿಂದ ಪದೇ ಪದೇ ಸುರಿಯುತ್ತಿರುವ ಮಳೆ ಮತ್ತು ಇದರಿಂದಾಗಿ ರಸ್ತೆಗಳ ದುಃಸ್ಥಿತಿ ಬಗ್ಗೆ ನ್ಯಾಯಪೀಠದ ಗಮನ ಸೆಳೆದರು. ಚರಂಡಿಗಳಿಂದ ತುಂಬಿ ಹರಿಯುತ್ತಿರುವ ನೀರಿನ ಸಮಸ್ಯೆಯನ್ನು ವಿವರಿಸಿದರು.
ಈ ಆಕ್ಷೇಪಣೆಗೆ ಬಿಬಿಎಂಪಿ ಪರ ವಕೀಲರು, "ನೀರು ನಿಂತಿರುವ ಭಾಗಗಳಲ್ಲಿ ಈಗಾಗಲೇ ಪಂಪ್ ಸೆಟ್‌ಗಳನ್ನು ಅಳವಡಿಸಿ ನೀರು ಖಾಲಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು 24x7 ಕೆಲಸ ಮಾಡುತ್ತಿದ್ದಾರೆ. ನೆರೆಪೀಡಿತ ಪ್ರದೇಶಗಳಿಂದ ನೀರು ಹರಿಸಲು ವಲಯವಾರು ಮಟ್ಟದಲ್ಲಿ ನಿರಂತರ ಕ್ರಮ ಕೈಗೊಳ್ಳಲಾಗಿದೆ" ಎಂದು ಸಮಜಾಯಿಷಿ ನೀಡಿದರು.