ಐ.ಟಿ. ಬಿ. ಟಿ. ಕಂಪನಿಗಳ ಜೊತೆ ಅಶ್ವಥ್ ನಾರಾಯಣ ಸಭೆ

ಬುಧವಾರ, 7 ಸೆಪ್ಟಂಬರ್ 2022 (14:02 IST)
ಬೆಂಗಳೂರು : ಮೂರು ದಿನಗಳಿಂದ ಮಳೆಗೆ ಇಡೀ ಬೆಂಗಳೂರೆ ನಲುಗಿ ಹೋಗಿದೆ.ನಿವಾಸಿಗಳ ಸಂಕಷ್ಟಕ್ಕೆ ಒಳಗಾಗಿದ್ದು, ಎನ್‌ ಡಿ ಆರ್‌ ಎಫ್‌ ನಿಂದ ರಕ್ಷಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಐಟಿ-ಬಿಟಿ ಕಂಪನಿಗಳ ಸಂಕಷ್ಟ ಆಲಿಸಲು ಸರ್ಕಾರ ಮುಂದಾಗಿದೆ.
 
ಐಟಿ-ಬಿಟಿ ಕಂಪನಿಗಳು ಮಳೆಯಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು, ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರು ಸಂಜೆ 5 ಗಂಟೆಗೆ ನಾನಾ ಸಾಫ್ಟ್‌ವೇರ್‌ ಕಂಪನಿಗಳ ಮುಖ್ಯಸ್ಥರ ಹಾಗೂ ಪ್ರತಿನಿಧಿಗಳ ಸಭೆ ಕರೆದಿದ್ದಾರೆ.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಬಿಬಿಎಂಪಿ ಮುಖ್ಯ ಆಯುಕ್ತರು, ಜಲಮಂಡಳಿ, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು, ನಗರ ಪೊಲೀಸ್‌ ಆಯುಕ್ತರೂ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ. ಸಚಿವ ಅಶ್ವತ್ತ ನಾರಾಯಣ ಈ ಸಭೆಯ ನೇತೃತ್ವವಹಿಸಲಿದ್ದಾರೆ.
 
ಸರ್ಕಾರ ಕರೆದಿರುವ ಈ ಸಭೆಯಲ್ಲಿ ಇನ್ಫೋಸಿಸ್‌, ವಿಪ್ರೊ, ಎಂಫಸಿಸ್‌, ನಾಸ್ಕಾಂ, ಗೋಲ್ಡ್ಮನ್‌ ಸ್ಯಾಕ್ಸ್‌, ಇಂಟೆಲ್‌, ಟಿಸಿಎಸ್‌, ಫಿಲಿಫ್ಸ್‌, ಸೊನಾಟಾ ಸಾಫ್ಟ್‌ವೇರ್‌ ಮುಂತಾದ ಕಂಪನಿಗಳ ಮುಖ್ಯಸ್ಥರು ಅಥವಾ ಇಲ್ಲವೇ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ