ಗುಜರಾತ್‌ಗೆ ತೆರಳುವಂತೆ ಹೈಕಮಾಂಡ್ ಆದೇಶ ನೀಡಿಲ್ಲ: ಡಿಕೆಶಿ

ಭಾನುವಾರ, 3 ಡಿಸೆಂಬರ್ 2017 (12:26 IST)
ದೇಶದ ಗಮನ ಸೆಳೆದಿರುವ ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಹೈಕಮಾಂಡ್ ಆದೇಶ ನೀಡಿಲ್ಲ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅನೇಕ ರಾಷ್ಟ್ರೀಯ ನಾಯಕರಿರುವುದರಿಂದ, ನಾನು ಗುಜರಾತ್‌ಗೆ ಹೋಗುವ ಅಗತ್ಯವಿಲ್ಲ. ರಾಜ್ಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
 
ಅಹ್ಮದಾಬಾದ್‌ನಿಂದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮದ್ ಪಟೇಲ್ ಸ್ಪರ್ಧಿಸಿದಾಗ, ಗುಜರಾತ್ ಕಾಂಗ್ರೆಸ್ ಶಾಸಕರಿಗೆ ರಾಜ್ಯದಲ್ಲಿ ಆಶ್ರಯ ನೀಡಿದ್ದರು. ಇದರಿಂದ ಗುಜರಾತ್ ಶಾಸಕರೊಂದಿಗೆ ಆತ್ಮಿಯತೆ ಹೊಂದಿದ್ದರಿಂದ ಡಿಕೆಶಿ ಗುಜರಾತ್‌ಗೆ ತೆರಳಲಿದ್ದಾರೆ ಎನ್ನುವ ವರದಿಗಳು ಹರಡಿದ್ದವು.
 
ಗುಜರಾತ್‌ನಲ್ಲಿ ಪ್ರಧಾನಿ ಮತ್ತು ರಾಹುಲ್ ಗಾಂಧಿ ಮಧ್ಯೆ ಬಿರುಸಿನ ಪ್ರಚಾರ ನಡೆದಿದ್ದು, ಯಾವ ಪಕ್ಷ ಗೆದ್ದು ಸರಕಾರ ರಚಿಸಲಿದೆ ಎನ್ನುವ ಕುತೂಹಲ ತೀವ್ರಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ