ಹಿಜಾಬ್ ವಿಚಾರಣೆ ಹೈಕೋರ್ಟ್ ನಲ್ಲಿ ಮತ್ತೆ ಮುಂದೆ

ಗುರುವಾರ, 24 ಫೆಬ್ರವರಿ 2022 (15:28 IST)
ಹಿಜಾಬ್​ ಕುರಿತ ರಿಟ್ ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ಆರಂಭವಾಗಿದೆ. ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದ ಮಂಡನೆ ಮಾಡಲಿದ್ದಾರೆ. ಶಿಕ್ಷಕರ ದೂರಿನ ಮೇರೆಗೆ ಒಂದು ಎಫ್‌ಐಆರ್ ದಾಖಲಾಗಿದೆ. ಈ FIRನ ದಾಖಲೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಉಪನ್ಯಾಸಕರ ಪರ ವಕೀಲ ಗುರು ಕೃಷ್ಣಕುಮಾರ್ ವಾದ ಮಂಡನೆ ಮಾಡಲಿ ದ್ದಾರೆ. ವಿದ್ಯಾರ್ಥಿಗಳಿಗೆ ತಾರತಮ್ಯರಹಿತ ಶಿಕ್ಷಣಕ್ಕಾಗಿ ಸಮವಸ್ತ್ರ ಮಾಡಲಾಗಿದೆ. ಸಮವಸ್ತ್ರ ನಿಯಮವನ್ನು ಸಂವಿಧಾನದ 25(1) ಆಧರಿಸಿ ಪ್ರಶ್ನಿಸಬಾರದು. ಜಾತಿ, ಧರ್ಮ, ಅಂತಸ್ತುಗಳ ತಾರತಮ್ಯ ಇರಬಾರದು ಎಂದು ಗುರು ಕೃಷ್ಣಕುಮಾರ್ ವಾದ ಮಂಡನೆ ಮಾಡುತ್ತಿದ್ದಾರೆ.
 
ಜಾತ್ಯಾತೀತ ಶಿಕ್ಷಣ ನೀಡುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ. ಆದಿಶಂಕರ ಶಿವಾಚಾರ್ಯ vs ತಮಿಳುನಾಡು ಕೇಸ್​ನ ತೀರ್ಪು ಪರಿಶೀಲಿಸಬೇಕು. ಜಾತ್ಯಾತೀತ ಶಿಕ್ಷಣ ನೀಡುವುದಕ್ಕಾಗಿ ನಿಯಮ ರೂಪಿಸಲಾಗಿದೆ. ಧಾರ್ಮಿಕ ಆಚರಣೆಗಾಗಿ ನಿಯಮ ರೂಪಿಸಲಾಗಿಲ್ಲ. ಧಾರ್ಮಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವುದು ಸರ್ಕಾರದ ಆದೇಶದ ಉದ್ದೇಶವಲ್ಲ. ಜಾತ್ಯಾತೀತ ಶಿಕ್ಷಣ ನೀಡುವಂತೆ ಮಾಡುವುದು ಆದೇಶದ ಉದ್ದೇಶವಾಗಿದೆ ಎಂದು ಪ್ರತಿವಾದಿಗಳ ವಾದಮಂಡನೆ ಮುಕ್ತಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ