ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ..!!!

ಶುಕ್ರವಾರ, 1 ಏಪ್ರಿಲ್ 2022 (18:09 IST)
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ, ಮಲ್ಲೇಶ್ವರ, ಬನಶಂಕರಿ, ಕೆ.ಆರ್‌.ಪುರ, ಗಾಂಧಿ ಬಜಾರ್‌ ಸೇರಿದಂತೆ ಮತ್ತಿತರ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಜೋರಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿಯೂ ತಾಗಿದೆ.
ಯುಗಾದಿಯ ವಿಶೇಷ ಮಾವು, ಬೇವಿನ ಸೊಪ್ಪಿನ ಖರೀದಿ ಭರಾಟೆ ಜೋರಾಗಿತ್ತು. ಒಂದು ಕಟ್ಟು ಮಾವಿನ ಸೊಪ್ಪು 20 ರೂ. ಮತ್ತು ಬೇವಿನ ಸೊಪ್ಪು 30 ರೂ.ಗೆ ಮಾರಾಟವಾಯಿತು. ಹೂವಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಸೇವಂತಿಗೆ ಹೂವು ಕೆ.ಜಿ. 180 ರಿಂದ 200 ರೂ., ಕನಕಾಂಬರ ಹೂವು ಕೆ.ಜಿ.ಗೆ 600 ರೂ., ಮಲ್ಲಿಗೆ ಮೊಗ್ಗು 300 ರೂ.ಗೆ ಮಾರಾಟ ವಾಯಿತು. ಹಾಗೆಯೇ ಕನಕಾಂಬರ ಹೂವು ಮಾರಿಗೆ 80 ರೂ. ಮತ್ತು ಮಲ್ಲಿಗೆ ಹೂವು ಮಾರಿಗೆ 40-50 ರೂ. ವರೆಗೂ ಖರೀದಿ ಆಯಿತು. ಸೇಬು ಹಣ್ಣು ಕೆ.ಜಿ.ಗೆ 110 ರೂ., ದ್ರಾಕ್ಷಿ 75 ರೂ., ಬಾಳೆ ಹಣ್ಣು 40 ರೂ., ಕಿತ್ತಳೆ ಹಣ್ಣು 60 ರೂ., ದಾಳಿಂಬೆ 80 ರೂ.ಗೆ ಮಾರಾಟ ವಾಯಿತು ಎಂದು ವ್ಯಾಪಾರಿಗಳು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ