ಭೀಕರ ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ: ವರ್ಷದಲ್ಲಿ ಒಟ್ಟು 140 ಬಲಿ

Sampriya

ಮಂಗಳವಾರ, 19 ಆಗಸ್ಟ್ 2025 (15:40 IST)
Photo Credit X
ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಕನಾನ್ ಗ್ರಾಮದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಿಂದಾಗಿ ಪ್ರವಾಹ ಉಂಟಾಗಿ ಒಂದು ಸೇತುವೆ ಹಾಗೂ ಮೂರು ಅಂಗಡಿಗಳು ಕೊಚ್ಚಿಹೋದ ಘಟನೆ ವರದಿಯಾಗಿದೆ. 

ಸುರಿದ ನಿರಂತರ ಮಳೆಗೆ ಹಲವೆಡೆ ಭೂ ಕುಸಿತ ಘಟನೆಗಳು ವರದಿಯಾಗಿದೆ.  ಮುನ್ನೆಚ್ಚರಿಕಾ ಕ್ರಮವಾಗಿ ಕುಲ್ಲು ಮತ್ತು ಬಂಜರ್ ಉಪವಿಭಾಗಗಳಲ್ಲಿ ಶಾಲೆಗಳು, ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. 

ಸೋಮವಾರ ತಡರಾತ್ರಿ ಶಿಮ್ಲಾದ ರಾಮಚಂದ್ರ ಚೌಕ್ ಬಳಿಕ ಸಮಭವಿಸಿದ ಭೂಕುಸಿತದಲ್ಲಿ 40ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಕಟ್ಟಡಗಳಿಗೆ ಹಾನಿಯಾಗಿದೆ. ಛೋಟಾ ಶಿಮ್ಲಾದಲ್ಲೂ ಮರಗಳು ನೆಲಕ್ಕೆ ಉರುಳಿವೆ.

ಜೂನ್ 20ರಂದು ಮುಂಗಾರು ಪ್ರಾರಂಭವಾದ ನಂತರ ಈವರೆಗೆ ಮಳೆ ಸಂಬಂಧಿತ ಅವಘಡಗಳಲ್ಲಿ ₹2,194 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ ಸಂಭವಿಸಿದ ದಿಢೀರ್ ಪ್ರವಾಹದಲ್ಲಿ 140ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ