ಹಿಂದುತ್ವ, ಮನುಷ್ಯತ್ವ ಇಲ್ಲದ ಆರ್‌ಎಸ್‌ಎಸ್‌, ಬಜರಂಗದಳ- ಸಿಎಂ

ಶುಕ್ರವಾರ, 12 ಜನವರಿ 2018 (06:53 IST)

ಆರ್ಎಸ್ಎಸ್ಮತ್ತು ಬಜರಂಗದಳದವರು ಹಿಂದುತ್ವ ಉಗ್ರಗಾಮಿಗಳು, ಅವರಿಗೆ ಹಿಂದುತ್ವ ಮತ್ತು ಮನುಷ್ಯತ್ವ ಇಲ್ಲ. ನಾವೆಲ್ಲ ಮನುಷ್ಯತ್ವ ಇರುವ ಹಿಂದೂಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಂಬಳಕಾಯಿ ಕಳ್ಳ ಎಂದರೆ ಬಿಜೆಪಿಯವರು ಹೆಗಲು ಮುಟ್ಟಿಕೊಂಡು ನೋಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬಜರಂಗದಳವರನ್ನು ನಾವು ನಿಷೇದ ಮಾಡಿಲ್ಲ ಎಂದರೆ ಬೆಂಬಲ ನೀಡುತ್ತೇವೆ ಎಂದಲ್ಲ. ಕೋಮುವಾದ ಭಾವನೆ ಕೆರೆಳಿಸಿದೆರೆ ಅದು ಯಾವುದೇ ಸಂಘಟನೆಯಾದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ನಮ್ಮನ್ನು ಲೆಕ್ಕ ಕೇಳಲು ಅಮಿತ್ ಶಾ ಯಾರು, ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆಗಿದ್ದಾಗ ಗುಜರಾತ್ ಸರ್ಕಾರ ಲೆಕ್ಕ ನೀಡಿತ್ತೇ ಎಂದು ಪ್ರಶ್ನಿಸಿದ ಅವರು, ನಮ್ಮಿಂದ ಸಂಗ್ರಹವಾದ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಅದರಲ್ಲೂ 11 ಸಾವಿರ ಕೋಟಿ ಕಡಿಮೆ ನೀಡಿದೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ