ರಾಜ ಮಹಾರಾಜರು ದೇಶವನ್ನು ಕಟ್ಟಿಲ್ಲ. ಬ್ರಿಟೀಷ್ ಮನಸ್ಥಿತಿಯ ಇತಿಹಾಸಕಾರರು ಸುಳ್ಳು ಬರೆದಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಮತ್ತೊಮ್ಮೆ ವಿವಾದದ ಹೇಳಿಕೆ ನೀಡಿದ್ದಾರೆ.
ಉಡುಪಿಯ ಪಲಿಮಾರು ಮಠದ ಪರ್ಯಾಯದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸಕಾರರು ಬರೆದ ಸುಳ್ಳನ್ನೇ ಓದುತ್ತಿದ್ದೇವೆ ಎಂದಿದ್ದಾರೆ.
ಭಾರತ ಕಾವಿ ಬಟ್ಟೆಯ ಇತಿಹಾಸವನ್ನು ಹೊಂದಿದೆ. ಆದರೆ, ಈ ಸತ್ಯವನ್ನು ಯಾರೂ ಒಪ್ಪಿಕೊಳ್ಳಲ್ಲ. ಧರ್ಮದ ಬಗ್ಗೆಯೂ ಸರಿಯಾದ ಜ್ಞಾನ ಪಡೆಯುವ ಶಕ್ತಿಯೂ ಕೆಲವರಿಗಿಲ್ಲ. ಪೂಜೆ ಮಾಡುವುದೇ ಕೆಲವರು ಧರ್ಮವೆಂದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನಾಸ್ತಿಕರನ್ನು ಧೃತರಾಷ್ಟ್ರನಿಗೆ ಹೋಲಿಸಿದ ಅವರು, ದೇಶದಲ್ಲಿ ಸಮಾನವಾದ ನಾಗರಿಕ ಸಂಹಿತೆ ಜಾರಿಗೆ ಬರಬೇಕು. ದುರ್ಯೋಧನ ಈಗ ಕಾಳಧನದ ರೂಪದಲ್ಲಿದ್ದಾನೆ. ದುಶ್ಯಾಸನ ದುಷ್ಟ ಶಾಸನದ ರೂಪದಲ್ಲಿದ್ದು, ಕೃಷ್ಣ ಮಠವನ್ನೇ ಕುಲಗೆಡಿಸಲು ಬಂದಿದ್ದರು ಎಂದು ವಾಗ್ದಾಳಿ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.