ಶುದ್ಧ ಕುಡಿಯುವ ನೀರಿನ ದರ ಹೆಚ್ಚಳ ವಿರೋಧಿಸಿ ಸಿಎಂಗೆ ಪತ್ರ ಬರೆದ ಹೆಚ್.ಕೆ.ಪಾಟೀಲ್
ಶನಿವಾರ, 8 ಜೂನ್ 2019 (11:31 IST)
ಬೆಂಗಳೂರು : ಶುದ್ಧ ಕುಡಿಯುವ ನೀರಿನ ದರ ಹೆಚ್ಚಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಹೆಚ್.ಕೆ.ಪಾಟೀಲ್ ಸಿಎಂ ಕುಮಾರಸ್ವಾಮಿ ಸಚಿವ ಕೃಷ್ಣ ಭೈರೇಗೌಡಗೆ ಪತ್ರ ಬರೆದಿದ್ದಾರೆ.
ನೀರಿನ ದರ ಹೆಚ್ಚಳಕ್ಕೆ ಸಚಿವ ಸಂಪುಟ ತೀರ್ಮಾನಿಸಿದೆ. ಶುದ್ಧ ನೀರಿನ ಘಟಕ ನಿರ್ವಹಣೆ ಕಷ್ಟವಾಗ್ತಿದೆ ಎಂದು ಹೆಚ್ಚಳ ಮಾಡಲಾಗಿದೆ. ಲೀಟರ್ ನೀರಿನ ದರ 10 ಪೈಸೆಯಿಂದ 25 ಪೈಸೆಗೆ ಹೆಚ್ಚಿಸಿದೆ. ಇಂತಹ ನಿರ್ಧಾರಗಳು ಕಾಂಗ್ರೆಸ್ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಹೆಚ್.ಕೆ.ಪಾಟೀಲ್ ಪತ್ರದ ಮೂಲಕ ತಿಳಿಸಿದ್ದಾರೆ.
ಹಾಗೇ ಕಾಂಗ್ರೆಸ್ ಪಕ್ಷ ಯಾವಾಗಲೂ ಬಡವರ ಪರ ಇರುತ್ತದೆ. ಹೀಗಾಗಿ ಉಚಿತ ಅಕ್ಕಿ, ಊಟ ಎಲ್ಲವನ್ನೂ ಕೊಟ್ಟಿದೆ. ಈಗ ನೀರಿನ ದರವನ್ನು ಹೆಚ್ಚಿಸಿರೋದು ಬೇಸರದ ಸಂಗತಿ ಎಂದು ಹೆಚ್.ಕೆ.ಪಾಟೀಲ್ ಬೇಸರ ವ್ಯಕ್ತಪಡಿಸಿ ಸಿಎಂ ಕುಮಾರಸ್ವಾಮಿ ಸಚಿವ ಕೃಷ್ಣ ಭೈರೇಗೌಡಗೆ ಪತ್ರಬರೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.