ಹೆಚ್.ಕೆ.ಪಾಟೀಲ್ ವಿರುದ್ಧ ಸ್ವಪಕ್ಷೀಯರು ಬೇಸರಗೊಂಡಿದ್ದೇಕೆ?

ಶನಿವಾರ, 8 ಜೂನ್ 2019 (11:29 IST)
ಬೆಂಗಳೂರು : JSW ಗೆ ಕೊಟ್ಟಿದ್ದ ಭೂಮಿ ಕ್ರಯಕ್ಕೆ ಒಪ್ಪಿಗೆ ವಿಚಾರದಲ್ಲಿ ಹೆಚ್.ಕೆ.ಪಾಟೀಲ್ ನಡೆದುಕೊಂಡ ರೀತಿಯ ವಿರುದ್ದ ಸ್ವಪಕ್ಷೀಯರು ಬೇಸರ ವ್ಯಕ್ತಪಡಿಸಿದ್ದಾರೆ.




ಜಿಂದಾಲ್ ಭೂಮಿ ಕ್ರಯಕ್ಕೆ ನೀಡಲು ಹೆಚ್.ಕೆ.ಪಾಟೀಲ್ ಮಾಧ್ಯಮಗಳ ಮುಂದೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಜಿಂದಾಲ್ ಭೂಮಿ ಕ್ರಯಕ್ಕೆ ನೀಡಬಾರದೆಂಬ ವಿಷಯದ  ಬಗ್ಗೆ ಮೊದಲು ಸಚಿವರ ಗಮನಕ್ಕೆ ತರಬೇಕಿತ್ತು. ಏಕಾಏಕಿ ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡಿದ್ದು ಸರಿಯಲ್ಲ. ಬಿಜೆಪಿಗೆ ಸ್ವಪಕ್ಷೀಯರಾದ ಹೆಚ್.ಕೆ,ಪಾಟೀಲ್ ಅಸ್ತ್ರ ಕೊಟ್ಟಂತಾಗಿದೆ ಎಂದು  ಹೆಚ್.ಕೆ.ಪಾಟೀಲ್ ವಿರುದ್ಧ ಕಾಂಗ್ರೆಸ್ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.


ಈ ಬಗ್ಗೆ ಕಾನೂನು ಸಚಿವ ಕೃಷ್ಣ ಭೈರೇಗೌಡ ಜೊತೆ ಚರ್ಚೆಸಬಹುದಿತ್ತು. ಅವರ ಜೊತೆಯೂ ಚರ್ಚಿಸದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಹಿರಿಯವರಾಗಿ ನೀವು ಹೀಗೆ ವಿರೋಧ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ  ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಹೋರಾಟಕ್ಕೆ ಸಜ್ಜಾಗಿದೆ. ಹೀಗಾಗಿ ಹೆಚ್.ಕೆ.ಪಾಟೀಲ್ ವಿರುದ್ಧ ಕೈ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ