ಹೆಚ್ ಡಿ ಕೆ ಆರೋಪಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿರುಗೇಟು

ಸೋಮವಾರ, 9 ಜನವರಿ 2023 (15:12 IST)
ಸ್ಯಾಂಟ್ರೊ ರವಿ ಗೃಹ ಸಚಿವರ ನಿವಾಸದಲ್ಲಿ ಹಣ ಏಣಿಸಿದ್ದ ಎಂಬ ಹೆಚ್ ಡಿಕೆ ಆರೋಪಕ್ಕೆ ಗೃಹಸಚಿವ ಪ್ರತಿಕ್ರಿಯಿಸಿದ್ದಾರೆ.
 
ಮಾಜಿ ಸಿಎಂ ಹೆಚ್ ಡಿ ಕೆ ಅತ್ಯಂತ ಬೇಜವಾಬ್ದಾರಿ ಯಿಂದ, ಸ್ಯಾಂಟ್ರೊ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂದು ಹೇಳಿಕೆ ಕೊಡ್ತಾರೆ.ಹೆಚ್ ಡಿಕೆ ಹಸಿ ಸುಳ್ಳನ್ನು ಹೇಳುವುದರ ಮೂಲಕ, ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ‌ಹೆಚ್ ಡಿಕೆ ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತು ಪಡಿಸಬೇಕು.ಸಾಂಟ್ರೋ ರವಿಯ ಹಿನ್ನೆಲೆಯ ಬಗ್ಗೆ ತನಿಖೆ ನಡೆಸಿ ವಿಚಾರಣೆ ಮಾಡಿ ಎಂದು ಪೊಲೀಸರಿಗೆ ತಿಳಿಸಿದ್ದೇನೆ.ನನ್ನ ಮನೆಯಲ್ಲಿ ಆತ ಹಣದ ಗಂಟನ್ನು ಬಿಚ್ಚಿದ್ದಾನೆ ಎಂದು, ಹೆಚ್ ಡಿಕೆ ಸತ್ಯಕ್ಕೆ ಅಪಚಾರವಾಗುವಂತಹ ಆಪಾದನೆ ಮಾಡಿದ್ದಾರೆ.ನನ್ನನ್ನು ಯಾವ ಕಾರಣದಿಂದ ತೇಜೋವಧೆ ಮಾಡುತ್ತಿದ್ದಾರೆ, ಎಂದು ತಿಳಿದಿಲ್ಲ.ಇದರಿಂದ ಅವರಿಗೆ ಯಾವರೀತಿ ಲಾಭ ವಾಗುತ್ತದೆ ಗೊತ್ತಿಲ್ಲ.ಗೃಹ ಸಚಿವ ನಾದ ನನ್ನನ್ನು,  ಸಮಾಜದ ಕಟ್ಟಕಡೆಯ ಜನರೂ ಒಳಗೊಂಡಂತೆ,  ದಿನನಿತ್ಯ ನೂರಾರು ಮಂದಿ ಭೇಟಿ ಮಾಡುತ್ತಾರೆ.ಪ್ರತಿಯೊಬ್ಬರ ಹಿನ್ನೆಲೆಯನ್ನೂ ಸೋಸಿ ನೋಡಲಾಗುವುದಿಲ್ಲ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ