ಗೃಹ ಸಚಿವ ಅರಗ ಜ್ಞಾನೇಂದ್ರ ಅಧಿಕಾರವಹಿಸಿಕೊಂಡ ಮೊದಲ ವರ್ಗಾವಣೆ ಪಟ್ಟಿ ಬಿಡುಗಡೆ
ಶುಕ್ರವಾರ, 8 ಅಕ್ಟೋಬರ್ 2021 (16:30 IST)
ಗೃಹ ಸಚಿವರಾಗಿ ಅರಗ ಜ್ಞಾನೇಂದ್ರ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ವರ್ಗಾವಣೆ ಪಟ್ಟಿ ಬಿಡಗುಡೆಯಾಗಿದೆ. ಪೊಲೀಸ್ ಪ್ರಧಾನ ಕಚೇರಿಯಲ್ಲಿದ್ದ ನಾಲ್ವರು ಡಿವೈಎಸ್ಪಿ ಹಾಗೂ 73 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿರುವ ಆದೇಶ ಹೊರ ಬಿದ್ದಿದೆ.
ಬೆಂಗಳೂರಿನ ಹತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ಪೊಲೀಸ್ ಇನ್ಸಪೆಕ್ಟರ್ ಗಳನ್ನು ವರ್ಗವಣೆ ಮಾಡಲಾಗಿದೆ. ಕೆಲವರಿಗೆ ಸಿಐಡಿ ಇನ್ನೂ ಕೆಲವರಿಗೆ ಸೈಬರ್ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಅಧಿವೇಶನ ಮುಗಿದ ಸೆ. 25 ರಂದೇ ವರ್ಗಾವಣೆ ಪಟ್ಟಿ ಬಿಡುಗಡೆ ಆಗುತ್ತದೆ ಎಂದೇ ಪೊಲೀಸ್ ಇಲಾಖೆಯಲ್ಲಿ ಭಾವಿಸಲಾಗಿತ್ತು. ಆದರೆ, ಎರಡು ವಾರ ಕಳೆದರೂ ಪೊಲೀಸ್ ಇಲಾಖೆಯಲ್ಲಿ ಯಾವ ವರ್ಗಾವಣೆ ಪಟ್ಟಿಯೂ ಹೊರ ಬಿದ್ದಿರಲಿಲ್ಲ. ಹೀಗಾಗಿ ಪೊಲೀಸ್ ಹುದ್ದೆ ನಿರೀಕ್ಷಣೆಯಲ್ಲಿದ್ದವರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಡಿವೈಎಸ್ಪಿಗಳ ಹುದ್ದೆ ವಿಚಾರಕ್ಕೆ ಬಂದರೆ ಯಾವುದೇ ಪೋಸ್ಟಿಂಗ್ ಇಲ್ಲದೇ ಕಾಯುತ್ತಿದ್ದ ರಾಜು, ಚಂದನ್ ಕುಮಾರ್, ಡಾ. ದೇವರಾಜ್ ಬಿ., ಲಕ್ಷ್ಮಯ್ಯ ವಿ ಅವರನ್ನಷ್ಟೇ ವರ್ಗಾವಣೆ ಮಾಡಲಾಗಿದೆ. ಉಳದಿಂತೆ ಯಾವುದೇ ಡಿವೈಎಸ್ಪಿ ಹುದ್ದೆಗಳ ವರ್ಗಾವಣೆಯಾಗಿಲ್ಲ.
ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ವಿಚಾರಕ್ಕೆ ಬಂದರೆ ವಿವಿಧ ಜಿಲ್ಲೆಗಳ 73 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಗೃಹ ಸಚಿವರಾಗಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ತಿಂಗಳಿಗೊಂದು ವರ್ಗಾವಣೆ ಪಟ್ಟಿ ಹೊರ ಬೀಳುತ್ತಿತ್ತು. ಇದು ಪೊಲೀಸ್ ಇಲಾಖೆಯಲ್ಲಿ ದೊಡ್ಡ ಚರ್ಚೆಗೆ ನಾಂದಿ ಹಾಡಿತ್ತು. ಆನಂತರದ ಬೆಳವಣಿಗೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಈಗಲೂ ಪೊಲೀಸ್ ಇಲಾಖೆ, ಇಲಾಖೆಯ ಪ್ರಗತಿ ಪರಿಶೀಲನೆ ಬಗ್ಗೆ ಹಾಲಿ ಸಿಎಂ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ ಎಂದು ಹೇಳಲಾಗಿದೆ. ನೂತನ ಗೃಹ ಸಚಿವರಾಗಿ ಅಗರ ಜ್ಞಾನೇಂದ್ರ ಪ್ರಮಾಣ ವಚನ ಸ್ವೀಕರಿಸಿದ ಎರಡು ತಿಂಗಳ ಬಳಿಕ ಮೊದಲ ವರ್ಗಾವಣೆ ಪಟ್ಟಿ ಹೊರ ಬಿದ್ದಿದೆ.
ವರ್ಗಾವಣೆ ಬಗ್ಗೆ ಕೇಳಿದ್ದಕ್ಕೆ ಸಿಎಂ ಮುನಿಸು: ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಮಾಧ್ಯಮಗಳ ಸುದ್ದಿಗೋಷ್ಠಿ ಕರೆದಿದ್ದರು. ಗೃಹ ಸಚಿವ ಅರಗ ಜ್ಞಾನೇಂದ್ರ ಇದ್ದರೂ, ಸುದ್ದಿಗೋಷ್ಠಿ ಬೊಮ್ಮಾಯಿ ಅವರದ್ದೇ ಆಗಿತ್ತು. ಇನ್ನೇನು ಮಾತು ಆರಂಭಿಸುವ ವೇಳೆ ಪತ್ರಕರ್ತರು ' ವರ್ಗಾವಣೆಯಲ್ಲಿ ಆಗುವ ದಂಧೆ, ಪ್ರಾಮಾಣಿಕ ಅಧಿಕಾರಿಗಳಿಗೆ ಪೋಸ್ಟಿಂಗ್ ಕೊಡುವುದಿಲ್ಲ ಎಂಬುದರ ಬಗ್ಗೆ ಪ್ರಸ್ತಾಪಿಸಿದರು. ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಸುದ್ದಿಗೋಷ್ಠಿಯನ್ನೇ ಸಿಎಂ ರದ್ದು ಮಾಡಿ ಹೊರ ನಡೆದಿದ್ದರು.
74 ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಪಟ್ಟಿ ಇಲ್ಲಿದೆ
ಸುದರ್ಶನ್ - ಜಿಗಣಿ ಪೊಲೀಸ್ ಠಾಣೆ ಬೆಂಗಳೂರು
ಮಂಜು ಬಿ.ಪಿ. ಸಿಇಎನ್ ಠಾಣೆ, ಚಿಕ್ಕಬಳ್ಳಾಪುರ,
ಕೆ. ಟಿ. ನಾಗರಾಜು, ಸಂಪಿಗೆಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು