ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಅವರು ಗೌರವವಂದನೆ ಸ್ವೀಕರಿಸಿದರು. ನಂತರ ಹಿರಿಯ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡರು. ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಕ್ಕೆ ಭೇಟಿ ನೀಡಿ ಸಿಸಿಟಿವಿ ನಿಗಾವಣೆ ವ್ಯವಸ್ಥೆಯನ್ನು ಖುದ್ದು ವೀಕ್ಷಿಸಿದರು.
112 ತುರ್ತು ಸೇವೆಯ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಹೊಯ್ಸಳ ಸಿಬ್ಬಂದಿಗೆ ಬೆರಳಚ್ಚು ಮುದ್ರೆ ಸ್ಕ್ಯಾನರ್ ಮತ್ತು ಬಾಡಿ ಕ್ಯಾಮೆರಾಗಳನ್ನು ವಿತರಿಸಿದರು. ಇದೇ ವೇಳೆ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಗೃಹಸಚಿವರು ಸಂಚಾರಿ ನಿರ್ವಹಣೆ ಹಾಗೂ ಅಪಘಾತ ಪ್ರಕರಣಗಳ ವರದಿಯನ್ನು ಬಿಡುಗಡೆ ಮಾಡಿದರು.
ಮಾದಕ ದ್ರವ್ಯ ಮಾರಾಟ, ಬಳಕೆ, ಸಾಗಾಣಿಕೆ, ದಾಸ್ತಾನಿನ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಮಾದಕದ್ರವ್ಯ ಜಾಲವನ್ನು ಬೇರುಮಟ್ಟದಿಂದ ಕಿತ್ತು ಹಾಕಬೇಕು. ಈ ಹಿಂದೆ ಏನಾಗಿದೆ ಎಂಬುದು ನಮಗೆ ಮಾಹಿತಿ ಇದೆ. ಅಂತಹ ಲೋಪದೋಷಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದ್ದಾರೆ.