ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಸ್ಥಿತಿ ನಿಜಕ್ಕೂ ಶಾಕಿಂಗ್

Krishnaveni K

ಗುರುವಾರ, 14 ಆಗಸ್ಟ್ 2025 (14:09 IST)
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ದೋಷಿಯೆಂದು ಜೀವನಪರ್ಯಂತ ಶಿಕ್ಷೆಗೊಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸ್ಥಿತಿ ಏನಾಗಿದೆ ಗೊತ್ತಾ?

ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎಂದು ತೀರ್ಪು ನೀಡಿತ್ತು. ಜೊತೆಗೆ ಜಿವನಪರ್ಯಂತ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಈ ತೀರ್ಪು ಅವರನ್ನು ಮಾನಸಿಕವಾಗಿ ತೀರಾ ಕುಗ್ಗಿಸಿದೆ.

ಜೀವಾವಧಿ ಶಿಕ್ಷೆಗೊಳಗಾಗಿರುವ ಪ್ರಜ್ವಲ್ ಮಾನಸಿಕವಾಗಿ ಕುಗ್ಗಿದ್ದಾರೆ. ಯಾರ ಜೊತೆಗೂ ಮಾತಿಲ್ಲ,ಕತೆಯಿಲ್ಲ, ಸರಿಯಾಗಿ ಊಟ ನಿದ್ರೆಯೂ ಮಾಡ್ತಿಲ್ಲ. ಹೀಗಾಗಿ ಪ್ರತಿನಿತ್ಯ ಜೈಲಿನಲ್ಲೇ ಅವರಿಗೆ ವೈದ್ಯರಿಂದ ಕೌನ್ಸೆಲಿಂಗ್ ಕೊಡಿಸಲಾಗುತ್ತಿದೆ.  ಶಿಕ್ಷೆಯ ಪ್ರಮಾಣ ಇಷ್ಟರ ಮಟ್ಟಿಗೆ ಇರಬಹುದು ಎಂದು ಪ್ರಜ್ವಲ್ ಕನಸಿನಲ್ಲೂ ಅಂದುಕೊಂಡಿರಲಿಲ್ಲ.

ಕೋರ್ಟ್ ಶಿಕ್ಷೆ ಪ್ರಕಟಿಸುವಾಗಲೂ ಅವರು ಕಣ್ಣೀರು ಹಾಕಿದ್ದರು. ಇದೀಗ ಜೀವನಪರ್ಯಂತ ಜೈಲಿನಲ್ಲಿ ಇರಬೇಕಾಗುತ್ತದೆ ಎನ್ನುವುದೇ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಜೈಲಿನಲ್ಲಿ ಪ್ರಜ್ವಲ್ ಗೆ ಇನ್ನೂ ಕೆಲಸ ನೀಡಲಾಗಿಲ್ಲ. ಜೈಲಿನ ಲೈಬ್ರರಿ ನಿರ್ವಹಣೆ ಕೆಲಸ ನೀಡಬಹುದು ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ