ತಾಯಿ-ಮಗಳು ಸೇರಿ 6 ಮಹಿಳೆಯರಿಂದ ಹನಿಟ್ರ್ಯಾಪ್! 13 ಮಂದಿ ಅರೆಸ್ಟ್!!

ಬುಧವಾರ, 18 ಆಗಸ್ಟ್ 2021 (15:13 IST)
ಕಷ್ಟ ಅಂತ ಮನೆಗೆ ಕರೆಸ್ತಾರೆ. ಅವರಲ್ಲೇ ಒಬ್ರು ಮಲಗಿ ನರಳಾಡ್ತಾರೆ. ಏನ್ ಸಹಾಯ ಮಾಡ್ಬೇಕು ಅಂತ ಕೇಳುವಷ್ಟರಲ್ಲಿ ನಕಲಿ ಪೊಲೀಸ್ರು ಮನೆಯನ್ನ ರೇಡ್ ಮಾಡ್ತಾರೆ. ಇದು ವೇಶ್ಯಾವಟಿಕೆ ಗೃಹ. ನಡೀ ಸ್ಟೇಷನ್ ಅಂತಾರೆ. ಸ್ವಾಮಿ... ಅಂಗಲ್ಲ, ಹಿಂಗೇ ಅಂತ ಕೈಕಾಲು ಹಿಡಿಯುವಷ್ಟರಲ್ಲಿ ಹಿಗ್ಗಾಮುಗ್ಗಾ ಥಳಿಸಿ ಬಟ್ಟೆ ಬಿಚ್ಚಿಸ್ತಾರೆ. ಅಷ್ಟರಲ್ಲಿ ಒಳಗಿಂದ ಅರೆನಗ್ನವಾಗಿ ಬಂದವಳು ಅವನ ಮೇಲೆ ಬೀಳ್ತಾಳೆ. ಎಲ್ಲವನ್ನೂ ರೆಕಾರ್ಡ್ ಮಾಡ್ಕೊಂಡು ಇದ್ದಷ್ಟು ಪೀಕಿಕೊಂಡು ಕಳಿಸ್ತಾರೆ. ಅಲ್ಲಿಂದ ಸ್ಟಾರ್ಟ್ ಆಗುತ್ತೆ ವಿಡಿಯೋ ಹೆಸರಲ್ಲಿ ಹಣ ಕೀಳೋ ದಂಧೆ. ಇದು ಕಷ್ಟ ಅಂತ ಕರೆಸಿ ಸುಖದ ಭಯ ಹುಟ್ಸೋ ಕಾಫಿನಾಡ ಕರಾಳ ದಂಧೆಯ ಕಥೆ.
ಸಾಲಾಗಿ ನಿಂತಿರೋ ಐದು ವಾಹನಗಳು. ಎರಡು ಲಕ್ಷಕ್ಕೂ ಅಧಿಕ ಕ್ಯಾಶ್. 17 ಮೊಬೈಲ್. 24 ಸಿಮ್ ಕಾರ್ಡ್. ಲಕ್ಷಾಂತರ ಮೌಲ್ಯದ ಗೋಲ್ಡ್ ಅಂಡ್ ಸಿಲ್ವರ್. ಸ್ಟೇಷನ್ ಮುಂದಿರೋ ಇವನ್ನೆಲ್ಲಾ ನೋಡಿ ಆಶ್ಚರ್ಯಕ್ಕೀಡಾಗಿರೋ ಕಾಫಿನಾಡ ಖಾಕಿಗಳು. ಇದ್ನೆಲ್ಲಾ ಸೀಝ್ ಮಾಡಿರೋದು ಚಿಕ್ಕಮಗಳೂರು ನಗರದಲ್ಲಿ ಕಷ್ಟದ ದಾರಿ ಹೇಳಿ, ಸುಖದ ಭಯ ಹುಟ್ಸಿ ಹಣ ಪೀಕ್ತಿದ್ದ ಖತರ್ನಾಕ್ ಗ್ಯಾಂಗ್‍ನಿಂದ. ಈ ತಂಡದಲ್ಲಿ ಲೇಡಿಸ್ ಅಂಡ್ ಜೆಂಟ್ಸ್ ಎಲ್ಲರೂ ಇದ್ದಾರೆ. ಇನ್ನೂ ಶಾಕಿಂಗ್ ಅಂದ್ರೆ ತಾಯಿ-ಮಗಳು ಇದ್ದಾರೆ. ಹನಿಟ್ರ್ಯಾಪ್ ದಂಧೆ ಮಾಡ್ತಿದ್ದ ಈ ತಂಡ ಪುರುಷರನ್ನ ಪುಸಲಾಯಿಸಿ ಮೋಸದ ಬಲೆಗೆ ಬೀಳಿಸಿ ನಗ್ನ ವಿಡಿಯೋ ಮಾಡ್ಕೊಂಡು ಯಾಮಾರಿಸ್ತಿದ್ರು. ಏಕಾಂತದಲ್ಲಿರುವಾಗ ಎಂಟ್ರಿ ಕೊಡೋ ಯುವಕರು ಪೊಲೀಸರೆಂದು ಹೇಳಿ ಹೆದರಿಸ್ತಿದ್ರು. ಇದು ವೇಶ್ಯಾಗೃಹ. ಎಫ್‍ಐಆರ್ ಹಾಕ್ತೀವಿ ಅಂತ ಅವಾಜ್ ಹಾಕ್ತಾರೆ. ಸ್ಪಾಟ್ ಸೆಟ್ಲ್‍ಮೆಂಟ್‍ಗೆ ಆಫರ್ ಕೊಡ್ತಾರೆ. ವಿಷ್ಯ ಹೊರಬಂದ್ರೆ ಮರ್ಯಾದೆ ಅಂತ ಕೇಳಿದಷ್ಟು ಹಣ ಕೊಟ್ಟು ಮನೆ ಸೇರ್ತಿದ್ರು ಮೋಸಕ್ಕೊಳಗಾದವರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ನಿಮ್ಮ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ನಿಮ್ಮ ಕುಟುಂಬದವರಿಗೂ ಕಳಿಸುತ್ತೇವೆಂದು ಹೆದರಿಸುತ್ತಿದ್ರು. ಇದರಿಂದ ಬೇಸತ್ತ ವ್ಯಕ್ತಿಗಳು ಖಾಕಿಗೆ ವಿಚಾರ ಮುಟ್ಟಿಸಿದಾಗ ರಿಯಲ್ ಪೊಲೀಸರು 13 ಜನರನ್ನ ಅಂದರ್ ಮಾಡಿದ್ದಾರೆ.

ಈ ಗ್ಯಾಂಗ್ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದದ್ದು ಮಧ್ಯ ವಯಸ್ಕ ಹಾಗೂ ಆರ್ಥಿಕವಾಗಿ ಚೆನ್ನಾಗಿರೋ ವ್ಯಕ್ತಿಗಳನ್ನಷ್ಟೆ. ಅವರ ಪರ್ಸನಲ್ ಡೇಟಾವನ್ನ ಕಲೆಹಾಕಿ ಸೈಲೆಂಟಾಗಿ ಹನಿಟ್ರಾಪ್ ದಂಧೆಗೆ ಕೆಡವಿಕೊಳ್ತಿದ್ರು. ವಿಷಯ ತಿಳಿದ ಕೂಡಲೇ ಕ್ಷಿಪ್ರ ಕಾರ್ಯಚರಣೆ ನಡೆಸಿದ ಕಾಫಿನಾಡ ನಗರ ಖಾಕಿಗಳು 6 ಗಂಡಸರು, 7 ಹೆಂಗಸರು ಸೇರಿದಂತೆ 13 ಜನರನ್ನ ಅಂದರ್ ಮಾಡಿದ್ದಾರೆ. ಬಂದಿತರಿಂದ 2 ಲಕ್ಷದಷ್ಟು ಹಣ, 5 ಕಾರುಗಳು, ಮೊಬೈಲ್, ಸಿಮ್, ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಹಾಸನ ಜಿಲ್ಲೆಯ ಸಕಲೇಶಪುರ ಮೂಲದ ಕಿರಾತಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಸುಲಭವಾಗಿ ವಾಮಮಾರ್ಗದಿಂದ ಹಣ ಮಾಡುವುದೇ ಈ ಗ್ಯಾಂಗಿನ ಗುರಿಯಾಗಿತ್ತು. ಆದರೆ, ಕಾಫಿನಾಡ ಪೆÇಲೀಸರು ಕಷ್ಟ ಹೇಳ್ಕೊಂಡು ಸುಖದ ಹೆಸರಲ್ಲಿ ಭಯ ಹುಟ್ಟಿಸ್ತಿದ್ದವರ ಹೆಡೆಮುರಿ ಕಟ್ಟಿ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ.
ಚಿಕ್ಕಮಗಳೂರು ನಗರ ಹಾಗೂ ಸೈಬರ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಖೆಡ್ಡಾಕೆ ಕೆಡವಿದ್ದಾರೆ. ಹೀಗೆ ಬಂಧಿತರಾಗಿರೋ 13 ಜನರೂ ಅನೇಕರಿಗೆ ಯಾಮಾರಿಸಿ ನಗ್ನ ವಿಡಿಯೋ ಮಾಡ್ಕೊಂಡು ಹಣ ಕಿತ್ತಿದ್ದಾರೆ. ಆದ್ರೆ, ಮರ್ಯಾದೆಗೆ ಅಂಜಿ ಅನೇಕರು ಪೊಲೀಸರಿಗೆ ಮಾಹಿತಿ ನೀಡಿಲ್ಲ. ಸದ್ಯ ಇಬ್ಬರು ವ್ಯಕ್ತಿಗಳು ನೀಡಿರೋ ಮಾಹಿತಿಯಿಂದ ಈ ಗ್ಯಾಂಗನ್ನ ಅಂದರ್ ಮಾಡಲಾಗಿದೆ. 13 ಜನ ಅಂದರ್ ಆಗಿದ್ದಾರೆ. ಹಣಕ್ಕಾಗಿ ತಾಯಿ-ಮಗಳು ಈ ದಂಧೆಯಲ್ಲಿ ಪಾಲ್ಗೊಂಡಿರೋದು ದುರಂತ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ