ಬ್ಯಾಡರಹಳ್ಳಿ ಲಕ್ಷಮ್ಮ ಅವರು ಕೋವಿಡ್‌ಗೆ ತುತ್ತಾಗಿ ಏಪ್ರಿಲ್ 22 ರಂದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸಮಸ್ಯೆ ಇದ್ದ ಕಾರಣ ಐಸಿನಲ್ಲಿ ಚಿಕಿತ್ಸೆ ನೀಡಲಾಯಿತು. ಅದೇ ಆಸ್ಪತ್ರೆಯ ಐಸಿ ವಾರ್ಡ್‌ನಲ್ಲಿ ಇಮ್ತಿಯಾಜ್ ಲ್ಯಾಬ್ ಸಹಾಯಕನಾಗಿ ಕೆಸಲ ಮಾಡುತ್ತಿದ್ದಾರೆ. ಈ ವೇಳೆ ರೋಗಿಯ ಕೊರಳಿನಲ್ಲಿ ಮೂರು ಲಕ್ಷ ಮೌಲ್ಯದ 70 ಗ್ರಾಂ ಮಾಂಗಲ್ಯ ಸರವನ್ನು ಗಮನಿಸಿದ್ದ ಇಮ್ತಿಯಾಜ್, ವೃದ್ಧೆಯ ಅರಿವಿಗೆ ಬಾರದ ಹಾಗೆ ಆ ಸರವನ್ನು ಕಳವು ಮಾಡಿದೆ. ಮೂರು ದಿನಗಳ ನಂತರ ತನ್ನ ತಾಯಿಯನ್ನು ನೋಡಲು ಬಂದ ವೃದ್ಧೆಯ ಪುತ್ರಿಯ ಕೊರಳಲ್ಲಿ ಮಾಂಗಲ್ಯ ಸರವಿಲ್ಲದಿರುವುದನ್ನು ಗಮನಿಸಿ, ಆಸ್ಪತ್ರೆಯ ಸಿಬ್ಬಂದಿ ಕೇಳಿದ್ದಾರೆ. ಇದಕ್ಕೆ ಸರಿಯಾದ ಪ್ರತಿಕ್ರಿಯೆ ಬಾರದಿದ್ದಾಗ, ಕೂಡಲೇ ಬ್ಯಾಡರಹಳ್ಳಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಅನುಮಾನದ ಆಸ್ಪತ್ರೆ ಸಿಬ್ಬಂದಿಗಳು, ಇಮ್ತಿಯಾಜ್‌ನನ್ನು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೆÇಲೀಸರು ಪ್ರಕಟಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.