"ಪ್ರಧಾನಿ ನರೇಂದ್ರಮೋದಿಯವರ ಟ್ವಿಟರ್ ಹ್ಯಾಂಡಲ್ ತೀರಾ ಅಲ್ಪಾವಧಿಗೆ ಹ್ಯಾಕ್ ಆಗಿತ್ತು. ಈ ವಿಷಯವನ್ನು ತಕ್ಷಣ ಟ್ವಿಟರ್ ಗಮನಕ್ಕೆ ತರಲಾಗಿದ್ದು, ತಕ್ಷಣವೇ ಖಾತೆಯನ್ನು ಸುರಕ್ಷಿತವಾಗಿ ಮಾಡಲಾಯಿತು. ಹ್ಯಾಕ್ ಆದ ಅಲ್ಪಾವಧಿಯಲ್ಲಿ ಶೇರ್ ಆದ ಟ್ವೀಟ್‍ಗಳನ್ನು ಕಡೆಗಣಿಸಬೇಕು" ಎಂದು ಪಿಎಂಓ ಟ್ವೀಟ್ ಮಾಡಿದೆ.
ಪಿಎಂ ಮೋದಿ ಖಾತೆಗೆ 73.4 ದಶಲಕ್ಷ ಅನುಯಾಯಿಗಳಿದ್ದು, ಇದೀಗ ಖಾತೆ ಮರುಸ್ಥಾಪನೆಯಾಗಿದ್ದು, ದುರುದ್ದೇಶಪೂರಿತ ಟ್ವೀಟ್‍ಗಳನ್ನು ಕಿತ್ತುಹಾಕಲಾಗಿದೆ.
"ಭಾರತ ಅಧಿಕರತವಾಗಿ ಬಿಟ್‍ಕಾಯಿನ್ ಅನ್ನು ಕಾನೂನುಬದ್ಧ ವಿನಿಮಯ ಸಾಧನವಾಗಿ ಸ್ವೀಕರಿಸಿದೆ. ಸರ್ಕಾರ ಅಧಿಕೃತವಾಗಿ 500 ಬಿಟಿಸಿಗಳನ್ನು ತಂದಿದ್ದು, ದೇಶದ ಎಲ್ಲ ನಿವಾಸಿಗಳಿಗೆ ವಿತರಿಸುತ್ತಿದೆ" ಎಂದು ಈಗ ಡಿಲೀಟ್ ಮಾಡಿರುವ ಟ್ವೀಟ್‍ನಲ್ಲಿ ಹೇಳಲಾಗಿತ್ತು.