ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಹಣಕಾಸು ಸಮಿತಿ ಮಾಡಿದ್ದ ಶಿಫಾರಸ್ಸನ್ನು ಕೇಂದ್ರೀಯ ಜಿಎಸ್ಟಿ ಮಂಡಳಿ ಅನುಮೋದಿಸಿದೆ.
ಹೀಗಾಗಿ ಮುಂಬರುವ ದಿನಗಳಲ್ಲಿ ಅಗ್ಗದ ದರದ ಹೋಟೆಲ್ ರೂಂ, ಆಸ್ಪತ್ರೆ ಬಿಲ್, ಅಂಚೆ ಸೇವೆ ಮತ್ತಷ್ಟು ದುಬಾರಿ ಆಗಲಿದೆ.
ದಿನದ ಬಾಡಿಗೆ ಸಾವಿರ ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗಿದ್ದ ವಿನಾಯ್ತಿ ರದ್ದು ಮಾಡಿ ಇವುಗಳಿಗೆ ಶೇ.12ರಷ್ಟು ತೆರಿಗೆ ಜಾರಿ ಆಗಲಿದೆ.
5 ಸಾವಿರಕ್ಕಿಂತ ಹೆಚ್ಚಿನ ಶುಲ್ಕ ಇರುವ ಐಸಿಯು ಹೊರತುಪಡಿಸಿದ ಆಸ್ಪತ್ರೆ ಕೊಠಡಿಗಳಿಗೆ ಶೇ.5ರಷ್ಟು ಜಿಎಸ್ಟಿ ಜಾರಿ ಆಗಲಿದೆ. ಅಂಚೆ ಇಲಾಖೆ ಬುಕ್ ಪೋಸ್ಟ್, 10ಗ್ರಾಂಗಿಂತ, ಕಡಿಮೆ ಇರುವ ಲಕೋಟೆ, ಚೆಕ್ಬುಕ್ಗೆ ಶೇ.18ರಷ್ಟು ತೆರಿಗೆ ಹೊರೆ ಬೀಳಲಿದೆ.