ಅಂಗನವಾಡಿಯಲ್ಲಿ ಬಿಸಿ ಸಾಂಬಾರ್ ಬಿದ್ದು ಬಾಲಕಿ ಗಂಭೀರ
ಮಾತನಾಡಲು ಹಾಗೂ ಊಟ ಮಾಡಲು ಆಗದ ಸ್ಥಿತಿಯಲ್ಲಿ ಬಾಲಕಿ ಇರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಕಳೆದ ಸೋಮವಾರ ಹೆಮ್ಮನಹಳ್ಳಿ ಅಂಗನವಾಡಿಯಲ್ಲಿ ನಿಹಾರಿಕಾ ಎಂಬ ಬಾಲಕಿಗೆ ಬಿಸಿ ಸಾಂಬಾರ್ ಇದ್ದ ಪರಿಣಾಮ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಅಂದು ಊಟದ ಸಮಯದಲ್ಲಿ ನಿಹಾರಿಕಾ ವಾಟರ್ ಬಾಟಲ್ ತರಲು ಓಡಿ ಹೋಗಿದ್ದಾಳೆ.
ಆ ಕಡೆಯಿಂದ ಅಂಗನವಾಡಿಯ ಆಯಾ ಲಕ್ಷ್ಮಿ ಮಕ್ಕಳಿಗೆ ಊಟ ಬಡಿಸಲು ಬಿಸಿ ಸಾಂಬಾರ್ನ್ನು ತರುತ್ತಿದ್ದ ವೇಳೆ ಇಬ್ಬರ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಆಯಾ ಕೈಯಲ್ಲಿ ಇದ್ದ ಬಿಸಿ ಸಾಂಬಾರ್ ನಿಹಾರಿಕಾಳ ಮುಖ ಹಾಗೂ ಬೆನ್ನಿನ ಭಾಗಕ್ಕೆ ಬಿದ್ದ ಪರಿಣಾಮ ಗಂಭೀರವಾಗಿ ಸುಟ್ಟ ಗಾಯಗಳು ಆಗಿವೆ.