105 ವರ್ಷದ ಕಮಲಮ್ಮ ಕೊರೊನಾ ಗೆದ್ದಿದ್ದು ಹೇಗೆ?

ಶನಿವಾರ, 12 ಸೆಪ್ಟಂಬರ್ 2020 (18:45 IST)
ಕೊರೋನಾ ಹಾಟ್‌ಸ್ಪಾಟ್ ಎಂದೇ ಖ್ಯಾತಿಯಾಗಿರುವ ಜಿಲ್ಲೆಯಲ್ಲಿ  ಕೋವಿಡ್‌ಗೆ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯವಾಗಿದೆ.

ಇದರ ಮಧ್ಯೆಯೂ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಗುಣಮುಖವಾಗಿದ್ದಾರೆ.

ಕಳೆದವಾರವರಷ್ಟೇ ಅವರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ  ಕೊಪ್ಪಳದ ಅವರ ಪುತ್ರ ಶಂಕರಗೌಡ ಅವರ ನಿವಾಸದಲ್ಲಿ ಹೋಮ್ ಐಸೋಲೇಶನ್ ಆಗಿ, ಮನೆಯಲ್ಲಿದ್ದುಕೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದರು.

ಜ್ವರ ಸೇರಿದಂತೆ ಮೊದಲಾದ ತೊಂದರೆಯನ್ನು ಅನುಭವಿಸುತ್ತಿದ್ದ  ಇವರ ಕೋವಿಡ್ ಪರೀಕ್ಷೆ ಮಾಡಿದ ವೇಳೆಯಲ್ಲಿ ಪಾಸಿಟಿವ್ ಬಂದಿತ್ತು. ಉಳಿದಂತೆ ಯಾವುದೇ ತೊಂದರೆ ಇರಲಿಲ್ಲ. ಹೀಗಾಗಿ, ಮನೆಯಲ್ಲಿಯೇ  ಚಿಕಿತ್ಸೆಯನ್ನು ನೀಡಲಾಯಿತು.

ವಾರ ಚಿಕಿತ್ಸೆ ಬಳಿಕ ಈಗ ಸಂಪೂರ್ಣ ಗುಣಮುಖವಾಗುತ್ತಿದ್ದು, ಕೊರೋನಾವನ್ನು ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ ನೆಗಟಿವ್ ಬಂದಿದೆ ಎನ್ನುತ್ತಾರೆ ಚಿಕಿತ್ಸೆಯನ್ನು ನೀಡಿದ ಮೊಮ್ಮಗ ಡಾ. ಶ್ರೀನಿವಾಸ ಹ್ಯಾಟಿ.

ಇತರೇ ಕಾಯಿಲೆಗಳು ಇರದೆ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆನ್ನು ನೀಡಲಾಯಿತು. ಅಲ್ಲದೆ ಕಮಲಮ್ಮನು ಆಸ್ಪತ್ರೆಗೆ ಹೋಗುವುದಕ್ಕೆ ಹಿಂದೇಟು ಹಾಕಿದ್ದರಿಂದ  ಮನೆಯಲ್ಲಿಯೇ ಚಿಕಿತ್ಸೆಯನ್ನು ನೀಡಿದ್ದಾರೆ.

ಔಷಧಿಯನ್ನು ಅಷ್ಟಕಷ್ಟೇ ನೀಡಲಾಗಿದೆ.  ಉಳಿದಂತೆ ಅವರಿಗೆ ಯಾವುದೇ ಸಮಸ್ಯೆ ಇಲ್ಲದೆ ಇರುವುದರಿಂದ ವಿಶೇಷ ನಿಗಾ ಇಡಲಾಗಿದೆಯೇ ಹೊರತು ವಿಶೇಷ ಚಿಕಿತ್ಸೆಯನ್ನು  ನೀಡಿಲ್ಲ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ