ಗಂಡು ಚಿರತೆ ಸೆರೆಸಿಕ್ಕಿದ್ದು ಹೇಗೆ ಗೊತ್ತಾ?

ಗುರುವಾರ, 17 ಜನವರಿ 2019 (16:41 IST)
ಜನರಲ್ಲಿ ಜೀವ ಭಯಕ್ಕೆ ಕಾರಣವಾಗಿದ್ದ ಗಂಡು ಚಿರತೆ ಕೊನೆಗೂ ಸೆರೆಯಾಗಿದೆ. ಆದರೆ ಇನ್ನೂ ಎರಡು  ಚಿರತೆಗಳು ಇರುವ ಶಂಕೆಯಲ್ಲಿ ಜನರಿದ್ದಾರೆ.

ಚಾಮರಾಜನಗರ ತಾಲ್ಲೂಕು ಸಾಸುವೆಹಳ್ಳ(ಮೇಲೂರು) ಬಳಿ ಚಿರತೆ ಸೆರೆಯಾಗಿದೆ. ರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಗಂಡು ಚಿರತೆ ಸೆರೆಯಾಗಿದೆ. ನಾಲ್ಕು ದಿನಗಳ ಹಿಂದೆಯೇ ಬೋನು ಇರಿಸಿದ್ದರು ಅರಣ್ಯ ಇಲಾಖೆಯವರು.

ಈ ಭಾಗದಲ್ಲಿ ಗ್ರಾನೈಟ್ ಕ್ವಾರಿಗಳು ಹೆಚ್ಚು ಸಂಖ್ಯೆಯಲ್ಲಿ ಇರುವುದರಿಂದ ಚಿರತೆಗಳು ಆವಾಸ ಸ್ಥಾನ ಮಾಡಿಕೊಂಡಿವೆ. ಇನ್ನೂ ಎರಡು ಚಿರತೆಗಳು ಈ ಭಾಗದಲ್ಲಿ ಇರುವ ಶಂಕೆ ಜನರದ್ದಾಗಿದೆ. ಹೀಗಾಗಿ ಮತ್ತೊಂದು ಬೋನು ಇರಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಯತ್ನ ಮುಂದುವರಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ