ಭೂಪೇಂದ್ರ ಮಿಶ್ರ (36) ಎಟಿಎಂನಲ್ಲಿ ಹಣ ಕಳ್ಳತನ ಮಾಡಿದ ಆರೋಪಿಯಾಗಿದ್ದು, ರೆಹೆನಾ ಶೇಕ್ ಎಂಬಾಕೆ ಇಂತಹ ಸಾಹಸ ಮಾಡಿದ ಯುವತಿ. ಈಕೆ ಡಿ.18 ರಂದು ಎಟಿಎಂನಲ್ಲಿ ಹಣ ತೆಗೆಯಲು ಪಿನ್ ಕೋಡ್ ಹಾಕಿದ್ದಾಗ, ಭೂಪೇಂದ್ರ ಮಿಶ್ರ ಎಟಿಎಂನೊಳಗೆ ಬಂದು ಈ ಎಟಿಎಂ ಸರಿಯಿಲ್ಲ. ಆದ್ದರಿಂದ ಇನ್ನೊಂದು ಎಟಿಎಂ ಬಳಸಿ ಎಂದು ಆಕೆಯನ್ನು ಮೋಸದಿಂದ ಕಳುಹಿಸಿ ಆಕೆಯ ಖಾತೆಯಿಂದ 10 ಸಾವಿರ ಹಣ ಕಳ್ಳತನ ಮಾಡಿದ್ದಾನೆ.
ಎಟಿಎಂನಲ್ಲಿ ಹಣ ಡ್ರಾ ಆದ ಸಂದೇಶ ನೋಡಿ ಯುವತಿಗೆ ಭೂಪೇಂದ್ರ ಮಿಶ್ರ ಮೇಲೆ ಅನುಮಾನಗೊಂಡಿದ್ದಾಳೆ. ನಂತರ ಆತ ಮತ್ತೊಮ್ಮೆ ಎಟಿಎಂಗೆ ಬರಬಹುದು ಎಂಬ ಖಾತ್ರಿಯಲ್ಲಿ ಸತತ 17 ದಿನಗಳ ಕಾಲ ಈ ಎಟಿಎಂನತ್ತ ಬಂದು ಕಾದು ಕುಳಿತು ಕೊನೆಗೆ ಆತನನ್ನು ಕಂಡು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾಳೆ.