ಪತ್ನಿ ಕೊಲೆಗೆ ಖತರ್ನಾಕ್ ಐಡಿಯಾ ಮಾಡಿದ್ದ ಡಾ ಮಹೇಂದ್ರ ರೆಡ್ಡಿ

Krishnaveni K

ಶುಕ್ರವಾರ, 17 ಅಕ್ಟೋಬರ್ 2025 (14:14 IST)
ಬೆಂಗಳೂರು: ಪತ್ನಿ ಡಾ ಕೃತಿಕಾ ರೆಡ್ಡಿ ಕೊಲೆಗೆ ಡಾ ಮಹೇಂದ್ರ ರೆಡ್ಡಿ ಮಾಡಿದ್ದ ಖತರ್ನಾಕ್ ಪ್ಲ್ಯಾನ್ ಈಗ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಡಾ ಕೃತಿಕಾ ರೆಡ್ಡಿಯನ್ನು ಪತಿ ಡಾ ಮಹೇಂದ್ರ ರೆಡ್ಡಿ ಕೊಲೆ ಮಾಡಿದ ಪ್ರಕರಣ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಪತ್ನಿಗೆ ಅತಿಯಾಗಿ ಅರಿವಳಿಕೆ ಕೊಟ್ಟು ಪತಿ ಕೊಲೆ ಮಾಡಿದ್ದ.

ಘಟನೆ ನಡೆದು ಆರು ತಿಂಗಳ ಬಳಿಕ ಎಫ್ಎಸ್ಎಲ್ ವರದಿಯಲ್ಲಿ ವಿಚಾರ ಬಯಲಿಗೆ ಬಂದಿತ್ತು. ಇದೀಗ ಮಹೇಂದ್ರ ರೆಡ್ಡಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು ಸತತವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆತ ಕೊಲೆಗೆ ಮಾಡಿದ್ದ ಸಂಚು ಬಯಲಾಗಿದೆ.

ಅನಸ್ತೇಷಿಯಾವನ್ನೇ ಯಾಕೆ ಆಯ್ಕೆ ಮಾಡಿಕೊಂಡ ಎನ್ನುವುದಕ್ಕೂ ಕಾರಣ ಗೊತ್ತಾಗಿದೆ. ಆತನೂ ವೈದ್ಯನಾಗಿದ್ದರಿಂದ ಅನಸ್ತೇಷಿಯಾ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಚೆನ್ನಾಗಿ ಅರಿತಿದ್ದ. ರೋಗಿಯ ದೇಹಕ್ಕೆ ಅನಸ್ತೇಷಿಯಾ ಓವರ್ ಡೋಸ್ ಕೊಟ್ಟರೂ ಕೆಲವೇ ಗಂಟೆಯಲ್ಲಿ ಅದರ ಶೇ.50 ರಷ್ಟು ಪ್ರಮಾಣ ಕಡಿಮೆಯಾಗುತ್ತದೆ. ನಂತರ ಕ್ರಮೇಣವಾಗಿ ಅನಸ್ತೇಷಿಯಾದ ಪ್ರಮಾಣ ದೇಹಕ್ಕೆ ಹೋಗಿರುವುದು ಗೊತ್ತೇ ಆಗಲ್ಲ ಎನ್ನುವುದನ್ನು ಅರಿತುಕೊಂಡು ಇದೇ ಮಾರ್ಗದಲ್ಲಿ ಪತ್ನಿಯನ್ನು ಸಾಯಿಸಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ