ಡಾ ಕೃತಿಕಾ ರೆಡ್ಡಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ಪತಿ ಮಹೇಂದ್ರ ರೆಡ್ಡಿ ಬಗ್ಗೆ ಮತ್ತೊಂದು ಸ್ಪೋಟಕ ಸತ್ಯ

Krishnaveni K

ಗುರುವಾರ, 16 ಅಕ್ಟೋಬರ್ 2025 (10:27 IST)
Photo Credit: X
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ ಕೃತಿಕಾ ರೆಡ್ಡಿಯನ್ನು ಆಕೆಯ ಪತಿ, ಡಾ ಮಹೇಂದ್ರ ರೆಡ್ಡಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹೇಂದ್ರ ರೆಡ್ಡಿ ಬಗ್ಗೆ ಮತ್ತೊಂದು ಸ್ಪೋಟಕ ಸತ್ಯ ಹೊರಬಿದ್ದಿದೆ.

ಗ್ಯಾಸ್ಟ್ರಿಕ್, ಲೋ ಶುಗರ್, ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿ ಕೃತಿಕಾಗೆ ಅನಸ್ತೇಷಿಯಾ ಹೈ ಡೋಸ್ ಔಷಧಿ ನೀಡಿ ಮಹೇಂದ್ರ ರೆಡ್ಡಿ ಕೊಲೆ ಮಾಡಿದ್ದ. ಆದರೆ ಈಗ ಆರು ತಿಂಗಳ ನಂತರ ಎಫ್ಎಸ್ಎಲ್ ವರದಿಯಿಂದಾಗಿ ಇದು ಕೊಲೆ ಎಂದು ತಿಳಿದುಬಂದಿದೆ.

ಈಗ ಮಹೇಂದ್ರ ಬಗ್ಗೆ ಕೃತಿಕಾ ಸಹೋದರಿ ಡಾ ನಿಖಿತಾ ‘ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಾದಾಗೆಲ್ಲಾ ಮಹೇಂದ್ರ ಐವಿ ತಗೋ ಎಂದು ಕೃತಿಕಾಗೆ ಒತ್ತಾಯ ಮಾಡುತ್ತಿದ್ದ. ಪಿರಿಯಡ್ಸ್ ನೋವಿಗೂ ಐವಿ ಇಂಜೆಕ್ಷನ್ ತಗೋ ಎಂದು ಒತ್ತಾಯ ಮಾಡುತ್ತಿದ್ದ. ಅನಸ್ತೇಷಿಯಾ ನೀಡಲು ಒಟಿಯೊಳಗೆ ಮಾತ್ರ ನೀಡಲು ಅವಕಾಶವಿತ್ತು. ಆದರೆ ಆತ ತನ್ನ ಪ್ರಭಾವ ಬಳಸಿ ತಂದಿರಬಹುದು.

ಆತ ಅವಳಿಗೆ ಇಷ್ಟ ಇಲ್ಲಾಂದ್ರೂ ಅವಳಿಗೆ ಇಂಜೆಕ್ಷನ್ ಕೊಡ್ತಿದ್ದ. ನನ್ನತ್ರನೂ ಅವಳು ಹೇಳಿಕೊಳ್ತಿದ್ಳು. ಅಂದರೆ ಮದುವೆಯಾದ ಬಳಿಕ ಎಲ್ಲಿಗೂ ಹೊರಗೆ ಕರ್ಕೊಂಡು ಹೋಗ್ತಿರಲಿಲ್ಲ. ಏನೂ ತಂದುಕೊಡ್ತಿರಲಿಲ್ಲ. ಈಗ ನಮಗೆ ಗೊತ್ತಾಗಿದ್ದು ಏನೆಂದರೆ ಆತನಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆತ ಈ ಕೆಲಸ ಮಾಡಿರಬಹುದು’ ಎಂದು ಡಾ ನಿಖಿತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ