ಶಿರೂರಿನಲ್ಲಿ ಗುಡ್ಡಕುಸಿತದಿಂದ ನಾಪತ್ತೆಯಾಗಿರುವವರ ಪತ್ತೆ ಕಾರ್ಯ ಹೇಗೆ ಸಾಗುತ್ತಿದೆ

Sampriya

ಬುಧವಾರ, 24 ಜುಲೈ 2024 (16:04 IST)
Photo Courtesy X
ಕಾರವಾರ: ನಿರಂತರ ಮಳೆಯಿಂದಾಗಿ ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ  ನಾಪತ್ತೆಯಾದವರ ಪತ್ತೆಗೆ ಶೋಧಕಾರ್ಯ ಮುಂದುವರೆದಿದೆ.  ಕೇರಳದ ಅರ್ಜುನ , ಕುಮಟಾದ ಜಗನ್ನಾಥ ಶೋಧಕ್ಕೆ ಭೂಸೇನೆ ಮತ್ತು ಎನ್.ಡಿ. ಆರ್.ಎಫ್ ತಂಡ ಬುಧವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭ ಮಾಡಿವೆ.

ಗಂಗಾವಳಿ ನದಿಯಲ್ಲಿ ಬೋಟ್ ಮೂಲಕ, ಮುಗುಳುತಜ್ಞರ ಸಹಾಯದಿಂದ ಶೋಧ ಕಾರ್ಯ ಸಾಗಿದೆ. ನದಿಯಲ್ಲಿ ಭಾರಿ ಪ್ರಮಾಣದ ಮಣ್ಣಿದ್ದು ಕಾರ್ಯಾಚರಣೆಗೆ ಅಡಚಣೆ ಎದುರಾಗುತ್ತಿದೆ. ಇದೀಗ ನೌಕಾಪಡೆಯ ಅಧಿಕಾರಿಗಳಿಂದಲೂ ಪರಿಶೀಲನೆ ನಡೆಯುತ್ತಿದೆ.

ಗುಡ್ಡ ಕುಸಿತದ ಪರಿಣಾಮವಾಗಿ ನದಿಯಲ್ಲಿ ಮಣ್ಣು ತುಂಬಿ ಹೋಗಿದ್ದು, ದನ್ನು ತೆರವು ಮಾಡಿದರೆ ಅಲ್ಲಿ ಸಾಕಷ್ಟು ವಾಹನಗಳು ಸಿಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಶೋಧ ಕಾರ್ಯಕ್ಕೆ  ಭಾರೀ ಸಾಮರ್ಥ್ಯದ ಪೊಕ್ಲೆನ್ ಯಂತ್ರ ಅಂಕೋಲಾಕ್ಕೆ ಆಗಮಿಸಿದ್ದು ನದಿಯಲ್ಲಿ ಶೋಧ ಕಾರ್ಯ ತೀವ್ರಗೊಳ್ಳಲಿದೆ.

ಈ ಯಂತ್ರದ ಮೂಲಕ  ಸಾಕಷ್ಟು ದೂರದ ವರೆಗೆ ಮಣ್ಣು ತೆರುವುಗೊಳಿಸುವ ಕಾರ್ಯ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ