ಚಿನ್ನ ಖದೀರಿಸುವವರಿಗೆ ಗುಡ್‌ನ್ಯೂಸ್, ದಿಢೀರ್ ಇಳಿಕೆಯಾದ ಚಿನ್ನದ ದರ

Sampriya

ಬುಧವಾರ, 24 ಜುಲೈ 2024 (14:50 IST)
Photo Courtesy X
ನವದೆಹಲಿ: ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿನ್ನೆ ಮಂಡಿಸಿದ ಬಜೆಟ್‌ನಲ್ಲಿ ಚಿನ್ನದ ಮೇಲಿನ ಅಮದು ಸುಂಕ ಕಡಿಮೆ ಮಾಡಿದ್ದರಿಂದ ಇದೀಗ ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತವಾಗಿದೆ.

ಅದರಂತೆ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 4,332.0 ರೂಪಾಯಿಗಳಷ್ಟು ಕಡಿಮೆಯಾಗಿದ್ದು ಪ್ರತಿ ಗ್ರಾಮ್ ಬೆಲೆ 7071.6 ಇದೆ.

22 ಕ್ಯಾರಟ್ ಹಳದಿ ಲೋಹದ ದರ ಪ್ರತಿ ಗ್ರಾಮ್ ಗೆ 6,477.5 ರೂಪಾಯಿಗಳಷ್ಟಿದ್ದು, 10 ಗ್ರಾಮ್ ಚಿನ್ನದ ದರದಲ್ಲಿ 3,970.0 ರೂಗಳಷ್ಟು ಕುಸಿತ ದಾಖಲಾಗಿದೆ.

24 ಕ್ಯಾರಟ್ ಚಿನ್ನದ ದರ ಕಳೆದ 1 ವಾರದಿಂದ ಶೇ.-0.94 ರಷ್ಟು ವ್ಯತ್ಯಾಸವಾಗಿದ್ದು, ಕಳೆದ ತಿಂಗಳು ಶೇ.-3.36 ರಷ್ಟು ವ್ಯತ್ಯಯವಾಗಿತ್ತು. ಎಂಸಿಎಕ್ಸ್‌ನಲ್ಲಿ ಬೆಳ್ಳಿ ಬೆಲೆಯು ಗಮನಾರ್ಹ ಇಳಿಕೆ ಕಂಡಿದ್ದು, ಪ್ರತಿ ಕೆಜಿಗೆ 88,995ರೂಗಳಿಂದ 84,275 ರೂಪಾಯಿಗಳಿಗೆ ಇಳಿದಿದೆ. ಈ ಮೂಲಕ ಚಿನ್ನ ಖರೀದಿಸುವ ಪ್ಲಾನ್‌ನಲ್ಲಿರುವವಾಗಿ ಈ ಬಜೆಟ್ ಖುಷಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ