ಮಂಡ್ಯದಲ್ಲಿ ಖಾಸಗಿ ಬಸ್ ಸುಟ್ಟಿದ್ದು ಯಾರು?
ನಸುಕಿನ 5 ಗಂಟೆ ಸಮಯದಲ್ಲಿ ಖಾಸಗಿ ಬಸ್ ವೊಂದು ಹೊತ್ತಿ ಉರಿದ ಘಟನೆ ನಡೆದಿದೆ. ಹೊತ್ತಿ ಉರಿದ ಬಸ್ ಕರಕಲಾದರೂ ಭಾರಿ ಅನಾಹುತವೊಂದ ತಪ್ಪಿದಂತಾಗಿದೆ.
ಮೈಸೂರು-ಬೆಂಗಳೂರು ಹೆದ್ದಾರಿಯ ಗಣಂಗೂರು ಬಳಿ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಹತ್ತಿರದಲ್ಲಿ ಕೇರಳ ಮೂಲದ ಖಾಸಗಿ ಬಸ್ ಗೆ ಬೆಂಕಿಗೆ ಸುಟ್ಟು ಕರಕಲಾಗಿದೆ.
ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತು ಬಸ್ ನಿಂದ ಪ್ರಯಾಣಿಕರೆಲ್ಲರೂ ಕೆಳಗೆ ಇಳಿದಿದ್ದಾರೆ. ಕೆಲ ಕ್ಷಣಗಳಲ್ಲೇ ಬಸ್ ಗೆ ಆವರಿಸಿದ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.